ಉಪ್ಪಳ: ಗಡಿನಾಡ ಕಲಾಸಂಘ ಪೈವಳಿಕೆ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಡಾ.ಎಂ.ರಾಮ ಅಭಿನಂದನ ಟಸ್ಟ್ ಪೈವಳಿಕೆ ಈ ಸಂಸ್ಥೆಗಳ ಸಹಯೋಗದಲ್ಲಿ ಅಕ್ಟೋಬರ್ 6 ಭಾನುವಾರ ಬೆಳಿಗ್ಗೆ 9.30 ರಿಂದ ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಠಾರದಲ್ಲಿ ದಸರಾ ನಾಡಹಬ್ಬ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವು ನಡೆಯಲಿದೆ.
ಕಾಸರಗೋಡಿನ ಕನ್ನಡ ತನವನ್ನು ಉಳಿಸಿ ಬೆಳೆಸಲು ಈ ಪ್ರದೇಶದ ಭಾಷೆ, ಸಾಹಿತ್ಯ, ಸಂಸ್ಕøತಿಗಳ ಪೆÇೀಷಕವಾದ ದಸರಾ ನಾಡಹಬ್ಬ ಮಹೋತ್ಸವವನ್ನು ಕಳೆದ ಮೂರು ದಶಕಗಳಿಂದ ಗಡಿನಾಡ ಕಲಾಸಂಘ ಮತ್ತು ಕ.ಸಾ.ಪ. ಕೇರಳ ಗಡಿನಾಡ ಘಟಕವು ನಡೆಸುತ್ತಾ ಬರುತ್ತಿದ್ದು, ಈ ವರ್ಷದಿಂದ ಹೊಸತಾಗಿ ರೂಪಿತವಾದ, ಡಾ.ಎಂ.ರಾಮ ಅಭಿನಂದನ ಟ್ರಸ್ಟ್ ವತಿಯಿಂದ ಪ್ರತಿಭಾವಂತ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನೂ ನೀಡುವ ಮಹತ್ಕಾರ್ಯವನ್ನು ಈ ದಸರಾ ನಾಡಹಬ್ಬದ ಜೊತೆಗೆ ಹಮ್ಮಿಕೊಳ್ಳಲಾಗಿದೆ.
ಶಿಕ್ಷಣ ತಜ್ಞ,ಭಾಷಾಂತರಕಾರ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ರಾಮ ಅವರು ಸಲ್ಲಿಸಿದ ಕನ್ನಡ ಸೇವೆ ಮತ್ತು ಅವರ ಸಾಮಾಜಿಕ ಕೈಂಕರ್ಯವನ್ನು ಪರಿಗಣಿಸಿ ಅವರಿಗೆ 2015ರಲ್ಲಿ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದರು. ಅಭಿನಂದನ ಸಮಿತಿಯು ಸಂಗ್ರಹಿಸಿದ ಧನದಲ್ಲಿ ಉಳಿತಾಯವಾದ ಮೊತ್ತವನ್ನು ಒಟ್ಟುಗೂಡಿಸಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯವನ್ನೊದಗಿಸುವ ದೃಷ್ಟಿಯಿಂದ ಸಹೃದಯರು ಜೊತೆ ಸೇರಿ ಪೈವಳಿಕೆಯಲ್ಲಿ ಡಾ.ಎಂ.ರಾಮ ಅಭಿನಂದನ ಟ್ರಸ್ಟ್‍ನ್ನು ರೂಪೀಕರಿಸಿದ್ದಾರೆ. ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಐದು ವಿದ್ಯಾಸಂಸ್ಥೆಗಳ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಟ್ರಸ್ಟ್‍ನ ಈ ಯೋಜನೆಯು ಈ ವರ್ಷದಿಂದ ಪ್ರಾರಂಭವಾಗುವುದು. ಟ್ರಸ್ಟ್‍ನ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪ್ರತಿವರ್ಷವೂ ದಸರಾ ನಾಡಹಬ್ಬದ ಈ ವಿಶೇಷ ಸಂದರ್ಭದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಅ.6 ರಂದು ಬೆಳಿಗ್ಗೆ 9.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಘಾಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು, ಕೇರಳ ಗಡಿನಾಡ ಘಟಕ ಇದರ ಅಧ್ಯಕ್ಷ ಎಸ್.ವಿ.ಭಟ್ ನಿರ್ವಹಿಸುವರು. ಅಧ್ಯಕ್ಷತೆಯನ್ನು ಗಡಿನಾಡು ಕಲಾಸಂಘದ ಅಧ್ಯಕ್ಷ ಕೋಚಣ್ಣ ಶೆಟ್ಟಿ ವಹಿಸುವರು. ಬಂಟ್ವಾಳದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು `ಶಿಕ್ಷಣ ಮತ್ತು ಸಂಸ್ಕøತಿ'ಯ ಕುರಿತು ವಿಶೇಷೋಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕೇರಳ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ರಾಮ ಪಾಲ್ಗೊಳ್ಳುವರು. ಅತಿಥಿಗಳಾಗಿ ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸುನೀತಾ ವಲ್ಟಿ ಡಿ'ಸೋಜ, ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ, ಪೈವಳಿಕೆ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ, ಪ್ರಭಾರ ಪ್ರಾಂಶುಪಾಲ ವಿಶ್ವನಾಥ ಕೆ.ಭಾಗವಹಿಸುವರು.
ಡಾ.ಎಂ.ರಾಮ ಅಭಿನಂದನ ಟ್ರಸ್ಟ್‍ನ ಅಧ್ಯಕ್ಷ ಸಿ.ರಾಘವ ಬಲ್ಲಾಳ್ ಎ.ಬಿ, ರಾಮಚಂದ್ರ ಭಟ್ ಪಿ, ಶಂಕರ ನಾರಾಯಣ ಭಟ್, ಶೇಖರ ಶೆಟ್ಟಿ ಕೆ, ಡಾ.ರತ್ನಾಕರ ಮಲ್ಲಮೂಲೆ ಮುಂತಾದವರು ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಶಾಲಾಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು ನಡೆಯಲಿರುವುದು.
ಡಾ.ಎಂ.ರಾಮ ಅಭಿನಂದನ ಟ್ರಸ್ಟ್ ವತಿಯಿಂದ ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯ ಕನ್ನಡ ಮಾಧ್ಯಮ ಶಾಲೆಯ ಪ್ರತಿಭಾವಂತರಾದ ಐದು ಮಂದಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಕನ್ನಡಿಗರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರಾಘವ ಬಲ್ಲಾಳ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.