ನವದೆಹಲಿ: ನಿಧಾನಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಆಗಸ್ಟ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) 98,202 ಕೋಟಿ ಸಂಗ್ರಹವಾಗಿದ್ದು ಜುಲೈ ತಿಂಗಳಿಗೆ ಹೋಲಿಸಿಕೊಂಡರೆ ಜಿಎಸ್ ಟಿ ಸಂಗ್ರಹ ಇಳಿಮುಖವಾಗಿದೆ.
ಕಳೆದ ಜೂನ್ ನಲ್ಲಿ 99,939 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈನಲ್ಲಿ 1.2 ಲಕ್ಷ ಕೋಟಿ ರುಪಾಯಿ ಸಂಗ್ರಹವಾಗಿತ್ತು. ಜುಲೈಗೆ ಹೋಲಿಸಿಕೊಂಡರೆ ಜಿಎಸ್ ಟಿ ಸಂಗ್ರಹದಲ್ಲಿ ಇಳಿಮುಖವಾಗಿದೆ.
ಇನ್ನು 2018ರ ಆಗಸ್ಟ್ ನಲ್ಲಿ 93,960 ಕೋಟಿ ರೂ. ಸಂಗ್ರಹವಾಗಿತ್ತು. 2019ರ ಆಗಸ್ಟ್ ನಲ್ಲಿ 98,202 ಕೋಟಿ ರುಪಾಯಿ ಸಂಗ್ರಹವಾಗಿದ್ದು ಶೇಕಡ 4.5ರಷ್ಟು ಏರಿಕೆಯಾಗಿದೆ.