ಮಂಜೇಶ್ವರ : ಐಶ್ವರ್ಯ-ಸಮೃದ್ಧಿಯ ಸಂಕೇತವಾದ ಓಣಂ ಹಬ್ಬದ ಸಂಭ್ರಮವನ್ನು ಕುಂಜತ್ತೂರು ಸರ್ಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ಆಚರಿಸಲಾಯಿತು.
ಕೊಲೆ-ಸುಲಿಗೆ, ಮೋಸ-ವಂಚನೆಯಿಂದ ದೂರವಿದ್ದ ಮಹಾಬಲಿಯ ಆಡಳಿತ ದಿನಗಳನ್ನು ನೆನಪಿಸಿಕೊಂಡು ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಕುಂಜತ್ತೂರು ಶಾಲೆಯಲ್ಲಿ ಸಡಗರದಿಂದ ಓಣಂ ಆಚರಿಸಿದರು. ಶಾಲೆಯಲ್ಲಿ ಅಧ್ಯಾಪಕರುಗಳು, ವಿದ್ಯಾರ್ಥಿಗಳು ವಿಶೇಷವಾದ ಪೂಕಳಂ ರಚಿಸಿದರು. ಈ ವರ್ಷ ಕಂಪ್ಯೂಟರಿನಲಿ ವಿದ್ಯಾರ್ಥಿಗಳು ಡಿಜಿಟಲ್ ಪೂಕಳಂ ತಯಾರಿಸುವುದು ವಿಶೇಷತೆಯಾಗಿತ್ತು. ಹಲವಾರು ವಿದ್ಯಾರ್ಥಿಗಳು ಡಿಜಿಟಲ್ ಪೂಕಳಂ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಪ್ರಳಯ ಬಾಧಿತರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಕೂಡಾ ಈ ಸಂದರ್ಭ ಮುಖ್ಯೋಪಾಧ್ಯಾಯರು ನೀಡಿದರು. ಮುಖ್ಯೋಪಧ್ಯಾಯ ಬಾಲಕೃಷ್ಣ ಜಿ., ಹಿರಿಯ ಅಧ್ಯಾಪಿಕೆ ಪ್ರಮೀಳಾ ಕುಮಾರಿ, ಅಶ್ರಫ್, ಕನಕಂ, ರವೀಂದ್ರ ರೈ, ಅನಿತಾ ಪಿ ಜಿ, ಸುಚೇತಾ ಕೆ, ಸರಿತಾ ಆರ್ ಕೆ, ಅಮಿತಾ ಬಿ ಮೊದಲಾದವರು ಹಿಸಿದ್ದರು. ಬಳಿಕ ಮಧ್ಯಾಹ್ನ ಓಣಂ ವಿಶೇಷ ಭೋಜನ(ಸಧ್ಯಂ) ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಹೆತ್ತವರು, ಸ್ಥಳೀಯರು ಪಾಲ್ಗೊಂಡರು.