ಬದಿಯಡ್ಕ: ಯಕ್ಷಸ್ನೇಹಿ ಬಳಗ ಪೆರ್ಲ, ಶೇಣಿ ರಂಗಜಂಗಮ ಕಾಸರಗೋಡು ಇವರ ಜಂಟಿ ಆಶ್ರಯದಲ್ಲಿ ಬದಿಯಡ್ಕ ಶಾಸ್ತ್ರೀಸ್ ಕಂಪೌಂಡ್‍ನಲ್ಲಿರುವ ಸೀತಾರಾಮ ಬಿಲ್ಡಿಂಗ್‍ನಲ್ಲಿ 2 ದಿನಗಳ ಯಕ್ಷಗಾನ ತಾಳಮದ್ದಳೆಯ ಸಮಾರೋಪವು ಭಾನುವಾರ ನಡೆಯಿತು. ಬದಿಯಡ್ಕದ ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಉಪನೊಂದಾವಣಾಧಿಕಾರಿ ಮುಹಮ್ಮದಾಲಿ ಪೆರ್ಲ ಯಕ್ಷರಂಗದಲ್ಲಿ ಶೇಣಿಯವರ ಪಾತ್ರದ ಕುರಿತು ವಿವರಣೆಯನ್ನು ನೀಡಿದರು. ಕಣಿಪುರ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರು ಅವರು ದಿ. ವೈ.ಡಿ.ನಾಯಕ್ ಹಾಗೂ ಶೇಣಿಯವರ ಸಂಸ್ಮರಣಾ ಭಾಷಣ ಮಾಡಿದರು. ವೈ.ಡಿ.ನಾಯಕ್‍ರ ಸುಪುತ್ರ ರಾಘವೇಂದ್ರ ನಾಯಕ್ ತಮ್ಮ ತೀರ್ಥರೂಪರ ಬಗ್ಗೆ ಮಾತನಾಡಿದರು. ವೈ.ಡಿ.ನಾಯಕ್‍ರ ಪತ್ನಿ ಹಾಗೂ ಕೋಟೆ ಗಣಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸಿದರು. ಸತೀಶ ಪುಣಿಚಿತ್ತಾಯ ಪೆರ್ಲ ಸ್ವಾಗತಿಸಿ, ನಾರಾಯಣ ಮೂಲಡ್ಕ ವಂದಿಸಿದರು.
ಬಳಿಕ ನುರಿತ ಕಲಾವಿದರುಗಳಿಂದ ತರಣಿಸೇನ ಪ್ರಸಂಗದಲ್ಲಿ ತಾಳಮದ್ದಳೆ ಜರಗಿತು. ಕಲಾವಿದರುಗಳಾದ ಬೇಂಗ್ರೋಡಿ ಗೋವಿಂದ ಭಟ್, ಸತೀಶ ಪುಣಿಚಿತ್ತಾಯ ಪೆರ್ಲ, ಮನೋಹರ ಬಲ್ಲಾಳ್ ಅಡ್ವಳ, ಅರವಿಂದ ಕುಮಾರ್ ನೇರೆಪ್ಪಾಡಿ, ನಾರಾಯಣ ಶರ್ಮ ನೀರ್ಚಾಲು, ಶೇಣಿ ವೇಣುಗೋಪಾಲ ಭಟ್, ನಾರಾಯಣ ಮೂಲಡ್ಕ, ಆನಂದ ಭಟ್ ಕೆಕ್ಕಾರು, ಸುಧೀಶ್ ಪಾಣಾಜೆ, ಡಾ. ಬೇ.ಸೀ.ಗೋಪಾಲಕೃಷ್ಣ ಭಟ್, ಈಶ್ವರ ನಲ್ಕ ಮೊದಲಾದವರು ಎರಡು ದಿನಗಳ ತಾಳಮದ್ದಳೆಯಲ್ಲಿ ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದರು. ಯಕ್ಷಾಭಿಮಾನಿಗಳು ಉಪಸ್ಥಿತರಿದ್ದರು.