ಉಪ್ಪಳ: ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ 2018-19 ವರ್ಷದ ವಾರ್ಷಿಕ ಮಹಾಸಭೆಯು ಸೆ. 28 ರಂದು ಶನಿವಾರ ಅಪರಾಹ್ನ 2 ರಿಂದ ಬ್ಯಾಂಕ್ ನ ಪ್ರಧಾನ ಕಛೇರಿಯ ಪರಿಸರದಲ್ಲಿ ನಡೆಯಿತು.
ಬ್ಯಾಂಕ್ ಅಧ್ಯಕ್ಷ ಸುಬ್ಬಣ್ಣ ಭಟ್ ಅವರು ಮಾತಾಡಿ ಬ್ಯಾಂಕ್ ನ ಸರ್ವತೋಮುಖ ಅಭಿವೃದ್ಧಿಗೆ ಸರ್ವ ಸದಸ್ಯರುಗಳು ಕಾರಣರಾಗಿದ್ದಾರೆ. ಸದಸ್ಯರ ಅವಶ್ಯಕತೆಗಳಾನುಸಾರವಾಗಿ ಬ್ಯಾಂಕ್ ವಿವಿಧ ಸಾಲಗಳನ್ನು ನೀಡುತ್ತಿದೆ. ಸಾಲವನ್ನು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕ್ ಇನ್ನಷ್ಟು ಅಭಿವೃದ್ದಿ ಹೊಂದಲಿದೆ ಎಂದರು.
ಬ್ಯಾಂಕ್ ನ ಕಾರ್ಯದರ್ಶಿ ಪ್ರಕಾಶ್ ಅವರು ಮಹಾಸಭೆಯಲ್ಲಿ 2018-19 ನೇ ವರ್ಷದ ವಾರ್ಷಿಕ ವರದಿ ಹಾಗೂ ಆಯವ್ಯಯ ಮಂಡಿಸಿದರು. ಬಳಿಕ 2018-19 ನೇ ವರ್ಷದ ಮುಂಗಡಪತ್ರಕ್ಕಿಂತ ಅಧಿಕ ಖರ್ಚಿನ ಅಂಗೀಕಾರ, 2020-21 ನೇ ವರ್ಷದ ಮುಂಗಡಪತ್ರ ಹಾಗೂ 2018-19 ನೇ ವರ್ಷದ ಅಡಿಟ್ ವರದಿಯನ್ನು ಅಂಗೀಕರಿಸಲಾಯಿತು. ನಿರ್ದೇಶಕ ಸುಬ್ರಮಣ್ಯ ಭಟ್ ಸ್ವಾಗತಿಸಿ, ಹರಿಣಾಕ್ಷ ವಂದಿಸಿದರು. ಸಂತೋಷ್ ಸಭೆ ನಿರ್ವಹಿಸಿದರು.