ಮಾಲೆ: ಮಾಲ್ಡೀವ್ಸ್ ನಲ್ಲಿ ಭಾನುವಾರ ನಡೆದ ಸ್ಪೀಕರ್ ಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಲೋಕಸಭಾ ಸ್ಪೀಕರ್
ಓಂ ಬಿರ್ಲಾ ನೇತೃತ್ವದ ಭಾರತೀಯ ನಿಯೋಗ, ಕಾಶ್ಮೀರ ಸಮಸ್ಯೆಯನ್ನು ಎತ್ತಿದ ಪಾಕಿಸ್ತಾನಿ ಪ್ರತಿನಿಧಿಗಳ ಕ್ರಮವನ್ನು ಸ್ಥಳದಲ್ಲಿಯೇ ಖಂಡಿಸಿದ್ದಾರೆ.
ಜೊತೆಗೆ, ಇಸ್ಲಾಮಾಬಾದ್ ತಮ್ಮ ದೇಶದಲ್ಲಿ ಹೇಗೆ ನರಮೇಧ ಮಾಡಿದೆ ಎಂಬುದು ಜಗತ್ತಿಗೆ ತಿಳಿದಿದೆ.
ಇದು ಈಗ ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶವಾಗಿದೆ ಎಂದು ನಿಯೋಗ ಟಾಂಗ್ ನೀಡಿದೆ.
ಪಾಕಿಸ್ತಾನ ತಮ್ಮ ದೇಶದ ಒಂದು ಭಾಗದಲ್ಲಿ ಹೇಗೆ ನರಮೇಧವನ್ನು ಮಾಡಿದ್ದಾರೆಂಬುದು ಜಗತ್ತಿಗೆ ತಿಳಿದಿದೆ. ಆ ಭಾಗ ಈಗ
ಬಾಂಗ್ಲಾದೇಶ ಎಂದು ಕರೆಯಲ್ಪಡುವ ಪ್ರತ್ಯೇಕ ದೇಶವಾಗಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು
ಈ ದೇಶಕ್ಕೆ ಯಾವ ನೈತಿಕ ಹಕ್ಕುಗಳಿವೆ ಎಂದು ಕೇಳಲು ಬಯಸುವುದಾಗಿ ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ ಸಿಂಗ್ ಪಾಕಿಸ್ತಾನ ವಿರುದ್ಧ ಹರಿಹಾಯ್ದಿದ್ದಾರೆ.
ಕಾಶ್ಮೀರದ ಮಾನವ ಹಕ್ಕುಗಳ ಸಮಸ್ಯೆಯನ್ನು ಎತ್ತಿದ್ದರಿಂದ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲ್ಪಡುವ ನಮ್ಮ ಕಾಶ್ಮೀರದ
ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ ಎಂದು ನಾನು ಹೇಳಲು ಬಯಸುವುದಾಗಿ ಹರಿವಂಶ ಸಿಂಗ್ ಟೀಕಾ ಪ್ರಹಾರ ನಡೆಸಿದ್ದಾರೆ.