ಬದಿಯಡ್ಕ: ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಖಂಡಿಗೆ ಶಾಮ ಭಟ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಭಾನುವಾರ ಮಧ್ಯಾಹ್ನ ಭೋಜನದ ಬಳಿಕ ನುರಿತ ಕಲಾವಿದರ ಕೂಡುವಿಕೆಯಲ್ಲಿ ಭೀಮಾಂಜನೇಯ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ರಮೇಶ್ ಭಟ್ ಪುತ್ತೂರು(ಭಾಗವತಿಕೆ), ಅಂಬೆಮೂಲೆ ಶಿವಶಂಕರ ಭಟ್(ಚೆಂಡೆ), ಲಕ್ಷ್ಮೀಶ ಬೇಂಗ್ರೋಡಿ(ಮದ್ದಳೆ) ಯಲ್ಲೂ, ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಪಕಳಕುಂಜ ಶಾಮ ಭಟ್, ಸೇರಾಜೆ ಸೀತಾರಾಮ ಭಟ್ ಹಾಗೂ ಬಾಲಕೃಷ್ಣ ಆಚಾರ್ಯ ನೀರ್ಚಾಲು ಪಾತ್ರ ನಿರ್ವಹಿಸಿದರು.