ಬದಿಯಡ್ಕ: ಬದಿಯಡ್ಕದಲ್ಲಿ ನಡೆದ 48ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಭವ್ಯ ಶೋಭಾಯತ್ರೆಯು ವರುಣದೇವನ ಕೃಪೆಯೊಂದಿಗೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದರೂ ಅಪರಾಹ್ನ ಶೋಭಾಯಾತ್ರೆ ಪ್ರಾರಂಭದ ವೇಳೆ ಮಳೆಯು ಸಂಪೂರ್ಣ ಬಿಡುವನ್ನು ನೀಡಿತ್ತು. ಮೋಡಕವಿದ ವಾತಾವರಣದಲ್ಲಿ ಅನೇಕ ಭಕ್ತಾದಿಗಳು ಪೇಟೆಯುದ್ಧಕ್ಕೂ ಮೆರವಣಿಗೆಯನ್ನು ವೀಕ್ಷಿಸಿದರು.
ಅದ್ಧೂರಿಯ ಶೋಭಾಯಾತ್ರೆ :
ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇವರಿಂದ ಸಂಚಾರಿ ಭಕ್ತಿಗೀತೆ, ಆರ್.ಸಿ.ಬಿ. ಬದಿಯಡ್ಕ ಸಾದರಪಡಿಸುವ ನೃತ್ಯ, ಧೀರಾಸ್ ಬದಿಯಡ್ಕ ಇವರಿಂದ ಸಂಚಾರಿ ಡ್ಯಾನ್ಸ್, ರುದ್ರಪಾಟಕ್ ಬ್ಯಾಂಡ್ ಸೆಟ್ ಬದಿಯಡ್ಕ ಇವರು ಸಾದರಪಡಿಸುವ ಬಾಂಗ್ಡಾನೃತ್ಯ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶ್ರೀದೇವರ ಭವ್ಯ ಶೋಭಾಯಾತ್ರೆಯು ಬದಿಯಡ್ಕ ಪೇಟೆಯಲ್ಲಿ ಸಂಚರಿಸಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮುಂಭಾಗದ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಸಂಪನ್ನವಾಯಿತು.
ಶನಿವಾರ ಸಂಜೆಯಿಂದ ನೂತನ ಗಣೇಶಗುಡಿ ಉದ್ಘಾಟನಾ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡಿದ್ದವು.
ಮಂಗಳವಾರ ಬೆಳಗ್ಗೆ ಉಷಃಪೂಜೆ, ಶ್ರೀ ಗಣೇಶ ಭಜನಾಮಂಡಳಿ ಬದಿಯಡ್ಕ, ಶ್ರೀಮಾತಾ ಹವ್ಯಕ ಭಜನಾ ಸಂಘ ಬದಿಯಡ್ಕ, ಶ್ರೀರಾಮ ಭಜನಾ ಮಂಡಳಿ (ಜಿಎಸ್‍ಬಿ)ಬದಿಯಡ್ಕ, ಪವನ್ ನಾಯಕ್ ಮತ್ತು ಬಳಗದವರಿಂದ ದಾಸ ಸಂಕೀರ್ತನೆ, ಗಂಗಾಧರ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಮಧ್ಯಾಹ್ನ ಮಹಾಪೂಜೆಯಲ್ಲಿ ಸಹಸ್ರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ಭೋಜನ ಪ್ರಸಾದವನ್ನು ಸ್ವೀಕರಿಸಿದರು.
ಹರಿದು ಬಂದ ಭಕ್ತ ಜನಸಾಗರ :
ಪ್ರತೀವರ್ಷದಂತೆ ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಭಕ್ತ ಜನಸಾಗರ ಹರಿದುಬಂದಿತ್ತು. 3ದಿನಗಳಲ್ಲಾಗಿ ಸುಮಾರು 20ಸಾವಿರಕ್ಕೂ ಹೆಚ್ಚುಮಂದಿ ಭಕ್ತಾದಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಿದರು.