ಮಂಜೇಶ್ವರ: ಕೋಳ್ಯೂರು ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಶ್ರೀಮಹಾಗಣಪತಿ ಶಂಕರನಾರಾಯಣ ಸಾಂಸ್ಕøತಿಕ ಕಲಾ ಪ್ರತಿಷ್ಠಾನ ಕೋಳ್ಯೂರು ಇವರು ಹಮ್ಮಿಕೊಂಡಿರುವ ಯಕ್ಷಗಾನ ನವಾಹ-2019 ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕ್ಷೇತ್ರದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ವಾಸುದೇವ ರಾವ್ ಸುರತ್ಕಲ್, ಗೋಪಾಲಕೃಷ್ಣ ಭಟ್ ಕಾನ, ವಿಶ್ವನಾಥ ಮಾಸ್ತರ್ ಎಂ.ಕೆ., ಪ್ರಸಾದ ಬಲಿಪ, ಗೋಪಾಲಕೃಷ್ಣ ತುಂಗ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಶನಿವಾರ ಆರಂಭಗೊಂಡ ಯಕ್ಷಗಾನ ನವಾಹ ಅ.6ರ ವರೆಗೆ ಪ್ರತಿದಿನ 9.30 ರಿಂದ 12.30ರ ವರೆಗೆ ತಾಳಮದ್ದಳೆ ರೂಪದಲ್ಲಿ ನಡೆಯಲಿದೆ. ಶನಿವಾರ ಸುರತ್ಕಲ್ಲಿನ ಶ್ರೀದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯವರಿಂದ ದಾನಶೂರ ಕರ್ಣ ಕಥಾನಕದ ಆಖ್ಯಾಯಿಕೆ ಪ್ರದರ್ಶಿಸಲ್ಪಟ್ಟಿತು.