ಮಂಜೇಶ್ವರ: ಕುಳೂರು ಸುಣ್ಣಾರಬೀಡು ಶ್ರೀ ಆದಿಶಕ್ತಿ ಗೋಪಾಲಕೃಷ್ಣ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವವು ಇಂದಿನಿಂದ(ಭಾನುವಾರ) ಆರಂಭಗೊಂಡು ಅ.8ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಂದು ಬೆಳಿಗ್ಗೆ ಗಣಹೋಮದ ಬಳಿಕ ಮಹಾನವಮಿಯ ಕೊಪ್ಪರಿಗೆಯೇರಲಿರುವುದು. ಮಹೋತ್ಸವದ ದಿನಗಳಲ್ಲಿ ನಿತ್ಯವೂ ವಿಶೇಷ ಪೂಜೆಗಳು, ಅನ್ನದಾನ ಮತ್ತು ಜಿಲ್ಲೆಯ ಪ್ರಸಿದ್ಧ ಮಂಡಳಿಗಳಿಂದ ಭಜನಾ ಸಂಕೀರ್ತನೆ ನಡೆಯಲಿರುವುದು. ಅ. 7 ರಂದು ಮಹಾನವಮಿಯ ಪ್ರಯುಕ್ತ ದೈವ ದೇವರಿಗೆ ವಿಶೇಷ ಸೇವೆ, ಆಯುಧ ಪೂಜೆ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9.30ಕ್ಕೆ ಸಿಂಚನ ಮ್ಯೂಸಿಕಲ್ ಆರ್ಕೆಸ್ಟ್ರಾ ಕುಳೂರು ಇವರಿಂದ ರಸಮಂಜರಿ, ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ. ಅ. 8 ರಂದು ವಿಜಯದಶಮಿ ಉತ್ಸವ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕಾಗಿ ಶ್ರೀಕ್ಷೇತ್ರದ ಆಡಳಿತ ಸಮಿತಿ ವಿನಂತಿಸಿದೆ.