ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಮಠ ಶ್ರೀಶಂಕರನಾರಾಯಣ ಕ್ಷೇತ್ರದಲ್ಲಿ ಜೀರ್ಣೋದ್ದಾರ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅವರು ಜೀರ್ಣೋದ್ದಾರ ಪ್ರಕ್ರಿಯೆಗಳ ಬಗ್ಗೆ ಅವಲೋಕನ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಅಗತ್ಯ ಚಟುವಟಿಕೆಗಳ ಬಗ್ಗೆ ಅವರು ಸೂಕ್ತ ಸಲಹೆಗಳನ್ನು ನೀಡಿದರು. ಜೀರ್ಣೋದ್ದಾರ ನಿರ್ವಹಣೆಯ ಬಗ್ಗೆ ಆಯೋಜಿಸಲಾದ ಲಕ್ಕೀ ಕೂಪನ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಯಿತು. ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ವರದಿಗಳನ್ನು ನೀಡಿದರು. ಶಂಕರ ದೇವರಮೆಟ್ಟು, ಶಿವರಾಮ, ಅಪ್ಪಣ್ಣ ಮಾಸ್ತರ್, ಬಾಲಸುಬ್ರಹ್ಮಣ್ಯ ಭಟ್ ನೀರ್ಚಾಲು, ನಾರಾಯಣ ಮಣಿಯಾಣಿ, ರವಿ ಕುಂಟಿಕಾನ, ಕೆ.ಎಂ.ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ.ಎಂ.ಶಾಮ ಭಟ್ ಸ್ವಾಗತಿಸಿ, ವಂದಿಸಿದರು.