HEALTH TIPS

ರಥಯಾತ್ರೆಯ ಮೂಲಕ ಧರ್ಮಸಂರಕ್ಷಣೆಯ ಸಂದೇಶ : ಶಶಿಧರ ಶೆಟ್ಟಿ- ಮಾವಿನಕಟ್ಟೆಯಲ್ಲಿ ಶ್ರೀ ಅಯ್ಯಪ್ಪ ಧರ್ಮಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ

         
       ಬದಿಯಡ್ಕ: ಸಹಸ್ರಾರು ವರ್ಷಗಳ ಇತಿಹಾಸವಿರುವ ಭಾರತೀಯ ಸಂಸ್ಕøತಿಯ ವೈಭವಕ್ಕೆ ಯಾವುದೇ ಧಕ್ಕೆ ಬರಬಾರದು. ಹಿಂದಿನ ಕಾಲದಲ್ಲಿ ನಮ್ಮ ಸಹನೆಯನ್ನು ದುರುಪಯೋಗಪಡಿಸಿಕೊಂಡು ಪರಕೀಯರು ನಮ್ಮ ಮೇಲೆ ಆಕ್ರಮಣವನ್ನು ಮಾಡಿದರು. ಇಂದು ನಮ್ಮ ರಾಜ್ಯದೊಳಗೇ ಸಂಸ್ಕøತಿಯ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣಕ್ಕೆ ತಕ್ಕ ಉತ್ತರವನ್ನು ನೀಡಬೇಕಾದರೆ ಹಿಂದುಗಳೆಲ್ಲ ಒಗ್ಗಟ್ಟಾಗಿ ನಿಂತು ಎದುರಿಸುವ ಕಾಲ ಸನ್ನಿಹಿತವಾಗಿದೆ. ರಥಯಾತ್ರೆಯ ಮೂಲಕ ಧರ್ಮಸಂರಕ್ಷಣೆಯ ಸಂದೇಶದ ರವಾನೆಯಾಗಬೇಕಾಗಿದೆ ಎಂದು ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯ ಸ್ವಾಗತ ಸಮಿತಿಯ ಜಿಲ್ಲಾ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು.
        ಸೋಮವಾರ ಮಾವಿನಕಟ್ಟೆ ಶ್ರೀ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಜರಗಿದ ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆ ಆಗಮಿಸಿದ  ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಸಾಧು ಸಂತರ ತಪಸ್ಸಿನ ಫಲವಾಗಿ ಭಾರತವು ವೈಭವದಿಂದ ಮೆರೆದಾಡಿದ ದೇಶವಾಗಿದೆ. ಅವರ ತ್ಯಾಗದ ಫಲವನ್ನು ಅನುಭವಿಸುವ ನಾವು ಇಂದು ನಮ್ಮ ಸಂಸ್ಕøತಿಯ ಮೇಲೆ ನಡೆಯುತ್ತಿರುವ ಅತಿಕ್ರಮಣವನ್ನು ಹೊಡೆದೋಡಿಸಬೇಕಿದೆ. ಶಬರಿಮಲೆಯ ಆಚಾರ ಅನುಷ್ಠಾನಗಳಿಗೆ ಅಪಚಾರ ಬಾರದಿರಲೆಂದು ನಾವೆಲ್ಲ ಒಂದೇ ದಾರಿಯಲ್ಲಿ ಸಾಗಿ ಸಂಸ್ಕøತಿಯ ರಕ್ಷಣೆಗೆ ಕೈಜೋಡಿಸಬೇಕು. ಅಯ್ಯಪ್ಪನ ಜ್ಯೋತಿ ಬೆಳಗುವಂತೆ ನಮ್ಮೆಲ್ಲರ ಬಾಳು ಬೆಳಕನ್ನು ಕಾಣಲಿ ಎಂದರು.
     ಶ್ರೀಮಂದಿರದ ಸೇವಾಸಮಿತಿಯ ಅಧ್ಯಕ್ಷ ದಿವಾಕರ ಮಾವಿನಕಟ್ಟೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಯ್ಯಪ್ಪ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಅನೇಕ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಕಣ್ಣಮುಂದೆ ನಡೆಯುತ್ತಿದ್ದು, ಇದಕ್ಕೆಲ್ಲ ಅಂತ್ಯ ಹಾಡುವ ಸಲುವಾಗಿ ಹಿಂದೂ ಸಮಾಜವು ಜಾಗೃತವಾಗಬೇಕಿದೆ. ಶಬರಿಮಲೆಯಿಂದ ಆಗಮಿಸಿದ ಅಯ್ಯಪ್ಪ ಜ್ಯೋತಿ ದರ್ಶನವು ನಮಗೆ ನವ ಚೈತನ್ಯವನ್ನು ನೀಡಲಿ ಎಂದರು.
      ಸ್ವಾಗತ ಸಮಿತಿಯ ತಾಲೂಕು ಅಧ್ಯಕ್ಷ ಸುರೇಶ್, ಶ್ರೀಮಂದಿರದ ಭಾಸ್ಕರ ಗುರುಸ್ವಾಮಿ, ಹಿರಿಯರಾದ ಕೃಷ್ಣ ಮಣಿಯಾಣಿ, ರತ್ನಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಬಾಲಕೃಷ್ಣ ಕೋಳಾರಿ ವಂದಿಸಿದರು. ಸೋಮವಾರ ಬೆಳಿಗ್ಗೆ ಬದಿಯಡ್ಕದಿಂದ ಆಗಮಿಸಿದ ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಗೆ ಮಾವಿನಕಟ್ಟೆಯಲ್ಲಿ ಅದ್ಧೂರಿಯ ಸ್ವಾಗತವನ್ನು ನೀಡಲಾಯಿತು. 2ನೇ ಮೈಲಿನಿಂದ ತತ್ವಮಸಿ ಸಿಂಗಾರಿಮೇಳ, ಮುತ್ತುಕೊಡೆಗಳೊಂದಿಗೆ ಮಾತೆಯರು ಹಾಗೂ ಮಹನೀಯರು ಮೆರವಣಿಗೆಯಲ್ಲಿ ರಥಯಾತ್ರೆಯನ್ನು ಬರಮಾಡಿಕೊಂಡರು. ಅಯ್ಯಪ್ಪ ಜ್ಯೋತಿ ದರ್ಶನಗೈದ ಭಕ್ತಾದಿಗಳು ವಿವಿಧ ಸೇವೆಗಳಲ್ಲಿ ಪಾಲ್ಗೊಂಡು, ಭಕ್ತಿಭಾವದಿಂದ ನಮಿಸಿದರು. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries