HEALTH TIPS

ಮನೆ ಮನೆಯಲ್ಲಿ ಪರಿವರ್ತನೆಯಾಗಬೇಕು : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

   
    ಕಾಸರಗೋಡು: ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗದೆ ಭಾರತೀಯ ಸಂಸ್ಕøತಿಯನ್ನು ಸಂರಕ್ಷಿಸುವ ಕೆಲಸಗಳಾಗಬೇಕು. ಅದಕ್ಕಾಗಿ ಮನೆ ಮನೆಗಳಲ್ಲಿ ಪರಿವರ್ತನೆಯಾಗಬೇಕು. ಭವಿಷ್ಯದ ರೂವಾರಿಗಳಾದ ಎಳೆಯ ಮಕ್ಕಳಿಗೆ ಮನೆಯಿಂದಲೇ ಭಾರತೀಯ ಸಂಸ್ಕøತಿಯ ಪಾಠವನ್ನು ದಾಟಿಸಬೇಕು ಎಂದು ಕರ್ನಾಟಕ ವಿಧಾನಪರಿಷತ್ತು ಮಾಜಿ ಪ್ರತಿಪಕ್ಷ ನಾಯಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. 
      ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಭಾನುವಾರ ನಡೆದ ಕಾಸರಗೋಡು ದಸರಾ - 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ಹಿರಿಯರು ಹಾಕಿಕೊಟ್ಟ ಹೆಜ್ಜೆಯನ್ನು ಗುರುತಿಸಿ ಅದರಂತೆ ನಡೆದುಕೊಳ್ಳಬೇಕು. ನಮ್ಮತನವನ್ನು ಮರೆಯುತ್ತಿರುವುದರಿಂದ ಇಂದು ನಾವು ಪ್ರಪಾತದ ಅಂಚಿಗೆ ಸರಿಯುತ್ತಿದ್ದೇವೆ. ಇಂತಹ ಪರಿಸ್ಥಿತಿಯಿಂದ ಪಾರಾಗಬೇಕಾದರೆ ಭಾರತೀಯ ಸಂಸ್ಕøತಿಯನ್ನು ಮನೆಮನೆಗಳಲ್ಲೂ ಅಳವಡಿಸಬೇಕು. ಭಾರತೀಯ ಆಚಾರ, ವಿಚಾರ, ಸಂಸ್ಕಾರಗಳನ್ನು, ಪುರಾತನ ರೀತಿ ರಿವಾಜುಗಳನ್ನು ದಿನ ನಿತ್ಯ ಪಾಲಿಸಬೇಕು. ದೇಶದಲ್ಲಿ ಇಂದು ಭಾರತೀ ಕೇಂದ್ರಿತ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು. ಈ ಮೂಲಕ ಪಾಶ್ಚಾತ್ಯ ಸಂಸ್ಕøತಿಯ ಹಾವಳಿಯಿಂದ ಪಾರಾಗಬಹುದು ಎಂದರು.
      ಕಾಸರಗೋಡಿನ ಕನ್ನಡಿಗರು ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಸರಗೋಡಿನ ಕನ್ನಡಿಗರಿಗೆ ಕೇರಳ ಸರಕಾರದಿಂದ ಅನ್ಯಾಯವಾದಾಗ ಅದನ್ನು ಪ್ರತಿಭಟಿಸುವುದಾಗಿ ಅವರು ಹೇಳಿದರು. ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕ ಸರಕಾರದಿಂದ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
     ಕಾರ್ಯಕ್ರಮದಲ್ಲಿ ಚು.ಸಾ.ಪ. ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್.ಅರಸ್ ಅವರು ಅಧ್ಯಕ್ಷತೆ ವಹಿಸಿದರು. ಸಾಹಿತಿ ವಿ.ಬಿ.ಕುಳಮರ್ವ, ಕಾಸರಗೋಡು ನಗರಸಭಾ ಸದಸ್ಯ ಶಂಕರ ಕೆ, ಮಧೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮಾದವ ಮಾಸ್ತರ್, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಟಿ.ಶಂಕರನಾರಾಯಣ ಭಟ್, ಕೆ.ವರಪ್ರಸಾದ್ ಕೋಟೆಕಣಿ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಡಾ.ಶೇಖರ್ ಅಜೆಕಾರ್, ಪುರುಷೋತ್ತಮ ನಾೈಕ್, ಜಗದೀಶ್ ಕೂಡ್ಲು ಮೊದಲಾದವರು ಉಪಸ್ಥಿತರಿದ್ದರು.
     ಇದೇ ಸಂದರ್ಭದಲ್ಲಿ ಸಮಾಜ ಸೇವಕ ಎಸ್.ಕುಮಾರ್, ಉದ್ಯಮಿಗಳಾದ ಕೆ.ಗಣೇಶ್ ನಾೈಕ್, ಲವ, ಎಂ.ಚಂದ್ರನ್ ನಾಯರ್, ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೆÇೀನ್ ವಾದಕ ಡಾ.ಉದಯ ಕುಮಾರ್ ಕೂಡ್ಲು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಖ್ಯಾತ ಚಿತ್ರ - ಶಿಲ್ಪ ಕಲಾವಿದ ಕೆ.ಲಕ್ಷ್ಮೀಶ ಆಚಾರ್ಯ ಮೊದಲಾದವರನ್ನು ಸಮ್ಮಾನಿಸಲಾಯಿತು.
     ಮೂಡಬಿದ್ರೆಯ ರಾಜ್ಯ-ರಾಷ್ಟ್ರ ಮಟ್ಟದ ಬಾಲಕಲಾವಿದರಿಂದ ಕಲಾ ಪ್ರದರ್ಶನ, ಚಿತ್ತರಂಜನ್ ಕಡಂದೇಲು ಅವರಿಂದ ಏಕ ವ್ಯಕ್ತಿ ಯಕ್ಷಗಾನ `ವೀರ ಬಬ್ರುವಾಹನ' ಪ್ರದರ್ಶನಗೊಂಡಿತು. ಸ್ಥಳೀಯ ಕಲಾವಿದರಿಂದ ಮ್ಯಾಜಿಕ್ ಶೋ, ನೃತ್ಯ ವೈವಿಧ್ಯ ನಡೆಯಿತು.
     ಕೆ.ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತನಾಡಿದರು. ಕಾವ್ಯಕುಶಲ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries