ಉಪ್ಪಳ: ಬ್ಯಾರಿ ಬಾಷೆ ಮತ್ತು ಸಂಸ್ಕೃತಿಯ ಉನ್ನತಿಗಾಗಿ ಎಲ್ಲಾ ವಿಭಾಗ ಜನರು ಕೈ ಜೋಡಿಸಬೇಕು ಎಂದು ಕನಾ9ಟಕ ಜಾನಪದ ಪರಿಷತ್ ಕೇಂದ್ರ ಘಟಕ ಅಧ್ಯಕ್ಷ, ನಿವೃತ್ತ ಐ.ಎ.ಎಸ್ ಅಧಿಕಾರಿ ಟಿ.ತಿಮ್ಮೆಗೌಡ ಅವರು ಹೇಳಿದರು.
ಕೇರಳ ರಾಜ್ಯ ಬ್ಯಾರಿ ಅಕಾಡೆಮಿ ವತಿಯಿಂದ ಭಾನುವಾರ ಜೋಡುಕಲ್ಲಿನಲ್ಲಿ ನಡೆದ ಬಿ. ಎಂ. ಇಚ್ಲಂಂಗೋಡುರವರ ಬ್ಯಾರಿ ಭಾಷೆ ವ್ಯಾಕರಣ ಗ್ರಂಥ ಬಿಡುಗಡೆ ಹಾಗೂ ಕೈ ಚಪ್ಪಾಲೆ ಜಾನಪದ ಹಾಡು ತರಬೇತಿ ಉದ್ಘಾಟನ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಿಮ್ಮೆಗೌಡರು ಜಾತಿ,ಮತ,ಪಕ್ಷಕ್ಕೆ ಅತೀತವಾಗಿರುವ ಸಹವತ9ನೆಯ ಬಾಳುವಿಕಯೇ ಗಡಿನಾಡ ಜನರ ಅಭಿವೃದ್ಧಿಗೆ ಕಾರಣ ಎಂದು ಅವರು ನುಡಿದರು. ಯುವ ಜನಾಂಗವು ವಿದೇಶಿ ಸಂಸ್ಕೃತಿ ಮತ್ತು ಭಾಷೆಗೆ ಆಕರ್ಷಿತರಾಗಿ ಪರಂಪರೆಯ ಅರಿವನ್ನು ಕಳಕೊಂಡಿರುತ್ತಾರೆ. ಭಾಷೆ, ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದರಲ್ಲಿ ಪ್ರತ್ಯೇಕ ಜಾಗ್ರತೆ ವಹಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರು. ಸಮಾಜದ ಎಲ್ಲಾ ವಿಭಾಗ ಜನರಿಗೆ ಬ್ಯಾರಿ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಲಭಿಸಲು ಅವಕಾಶ ನೀಡುವ ಇಂತಹ ಕಾರ್ಯ ಕ್ರಮಗಳನ್ನು ಕೇರಳ ರಾಜ್ಯ ಬ್ಯಾರಿ ಅಕಾಡೆಮಿ ಹಮ್ಮಿಕೊಳುತ್ತಿರುವುದು ಸ್ತುತ್ಯರ್ಹವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಬಹುಭಾಷ ಕವಿ, ಚಿತ್ರ ನಟ ಮುಹಮ್ಮದ್ ಬಡ್ಡೂರು, ನಾಟಕ ಮತ್ತು ಚಿತ್ರ ನಟಿ ರೂಪಾ ವರ್ಕಾಡಿ, ಸಮಾಜ ಸೇವಕ ಹಾಗೂ ಪ್ರವಾಸಿ ಅಬೂಬಕ್ಕರ್ ಬೋಳ್ಳಾರ್, ಪ್ರವಾಸಿ ಉದ್ಯಮಿ ಸಿದ್ದಿಕ್ ಅಜ್ಮಾನ್ ರವರ ಸಾಧನೆಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಕೇರಳ ರಾಜ್ಯ ಬ್ಯಾರಿ ಅಕಾಡಮಿ ಅಧ್ಯಕ್ಷ ಸೈಫುಲ್ಲ ತಂಙಳ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ದಿಕ್ಸೂಚಿ ಭಾಷಣ ಮಾಡಿದರು. ಜಾನಪದ ಪರಿಷತ್ ಬೆಂಗಳೂರು ಕಾಸರಗೋಡು ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಮಂಗಲ್ಪಾಡಿ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಎಂ.ಮುಸ್ತಫ, ಪ್ರೊ.ಎ.ಶ್ರೀನಾಥ್, ತೆಹ್ರಿಕೆ ಉದ್ರು ರಾಜ್ಯ ಪ್ರಧಾನ ಕಾರ್ಯದರ್ಶಿ ಅಜೀಂ ಮಣಿಮುಂಡ, ಪತ್ರಕರ್ತ ದಯಾಸಾಗರ್ ಚೌಟ ಮುಂಬಯಿ, ಯಕ್ಷದ್ರುವ ಪಡ್ಲ ಫೌಂಡೇಶನ್ ಕುಂಬಳೆ ಘಟಕದ ಅಧ್ಯಕ್ಷ ಎಸ್.ಜಗನ್ನಾಥ ಶೆಟ್ವಿ ಕುಂಬಳೆ, ಅರಿಮಲೆ ಕಾಯಿಞÂ್ಞ ಹಾಜಿ, ಜೆ.ಕೆ.ವಿ. ಕ್ಲಬ್ ಅಧ್ಯಕ್ಷ ಸಂಪತ್ ಕುಮಾರ್, ಅಬ್ದುಲ್ ಲತೀಫ್ ಬಿ.ಎ.ಉಪಸ್ಥಿತರಿದ್ದು ಮಾತಾನಾಡಿದರು. ಬಳಿಕ ಜಾನಪದ ಹಾಡುಗಳ ಸರದಾರ ಅಬ್ದುಲ್ ಲತೀಫ್ ಹೇರೂರು ರವರ ನೇತೃತ್ವತದಲ್ಲಿ ಜಾನಪದ ಹಾಡುಗಾರರಾದ ಶಾಫಿ ಹಾಜಿ ಪೈವಳಿಕೆ, ಅರಬಿ ಜೊಡುಕಲ್ಲು ರವರು ಕೈ ಚಪ್ಪಾಲೆ ಜಾನಪದ ಹಾಡು ತರಬೇತಿ ಶಿಬಿರಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದಶಿ9 ಜುಲ್ಫಿಕರ್ ಅಲಿ ಕಯ್ಯಾರ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅಜೀಜ್ ಕಳಾಯಿ ನಿರೂಪಿಸಿದರು. ಕೊಶಾಧಿಕಾರಿ ಎಂ.ಕೆ.ಇ. ಮಜೀದ್ ವಂದಿಸಿದರು.