ಉಪ್ಪಳ: ಕಯ್ಯಾರು ಕ್ರಿಸ್ತರಾಜ ದೇವಾಲಯದ ಯುವ ವಿದ್ಯಾರ್ಥಿ ಸಂಚಲನ (ವೈ.ಸಿ.ಎಸ್) ನೇತೃತ್ವದಲ್ಲಿ ಶಿಕ್ಷಕ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು.
ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾದರ್ ಐವನ್ ಡಿ'ಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಜೋನ್ ಡಿ'ಸೋಜ , ಪಾಲನಾ ಸಮಿತಿ ಕಾರ್ಯದರ್ಶಿ ರೋಶನ್ ಡಿ'ಸೋಜ, ವಿಜಯ ಜೆಸುರಾಜ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾಸ್ಮಿನ್, ಸಿಸ್ಟರ್ ರೀನಾ, ವೈ.ಸಿ.ಎಸ್. ಅಧ್ಯಕ್ಷ ಅಜಿತ್ ಡಿ'ಸೋಜ ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಜೋನ್ ಡಿ'ಸೋಜ ಸಂದೇಶ ನೀಡಿದರು.
ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಈ ಸಂದರ್ಭದಲ್ಲಿ ವೈ.ಸಿ.ಎಸ್. ಘಟಕದ ಲಾಂಛನವನ್ನು ಫಾದರ್ ಐವನ್ ಡಿ'ಮೆಲ್ಲೊ ಬಿಡುಗಡೆ ಗೊಳಿಸಿದರು. ಪಾಲ್ಗೊಂಡ ಶಿಕ್ಷಕರಿಗೆ ವೇದಿಕೆಯಲ್ಲಿದ್ದ ಅತಿಥಿಗಳು ನೆನಪಿನ ಕಾಣಿಕೆ ನೀಡಿದರು. ಸ್ಪರ್ಧಾ ವಿಜೇತರಿಗೆ ಫಾದರ್ ಐವನ್ ಡಿ'ಮೆಲ್ಲೊ ಬಹುಮಾನ ವಿತರಿಸಿದರು. `ನನ್ನ ಶಿಕ್ಷಕಿ' ಕುರಿತು ಮೆಲಿಶಾ ಡಿ'ಸೋಜ ಅನಿಸಿಕೆ ವ್ಯಕ್ತಪಡಿಸಿದರು. ಸ್ಯಾಂಡ್ರಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.