HEALTH TIPS

ಜಮ್ಮು-ಕಾಶ್ಮೀರದ ಪಂಚ್, ಸಪರ್ಂಚ್ ಗಳಿಗೆ ಭದ್ರತೆ, ವಿಮಾ ಸೌಲಭ್ಯ: ಅಮಿತ್ ಶಾ

      ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಪಂಚಾಯತ್ ಸದಸ್ಯ(ಪಂಚ್) ಮತ್ತು ಗ್ರಾಮದ ಮುಖ್ಯಸ್ಥರಿಗೆ(ಸರ್ ಪಂಚ್) ಸೂಕ್ತ ಪೊಲೀಸ್ ಭದ್ರತೆ ಹಾಗೂ ತಲಾ 2 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಸೋಮವಾರ ಅವರನ್ನು ಭೇಟಿಯಾದ ಜಮ್ಮು-ಕಾಶ್ಮೀರದ ಪಂಚ್ ಮತ್ತು ಸರ್ ಪಂಚ್ ಅವರಿಗೆ ಗೃಹ ಸಚಿವರು ಈ ಭರವಸೆ ನೀಡಿದ್ದಾರೆ.
     Àಮಗೆ ಭದ್ರತೆ ನೀಡಬೇಕೆಂದು ಕೇಳಿಕೊಂಡ ಮನವಿಗೆ ಸಚಿವ ಅಮಿತ್ ಶಾ ಅವರು ಒಪ್ಪಿಕೊಂಡಿದ್ದಾರೆ ಎಂದು ಕುಪ್ವಾರ ಜಿಲ್ಲೆಯ ಸಪರ್ಂಚ್ ಮಿರ್ ಜುನೈಡ್ ತಿಳಿಸಿದ್ದಾರೆ. ಪ್ರತಿ ಪಂಚಾಯತ್ ಸದಸ್ಯ ಮತ್ತು ಗ್ರಾಮದ ಮುಖ್ಯಸ್ಥನಿಗೆ 2 ಲಕ್ಷದವರೆಗೆ ವಿಮಾ ಸೌಲಭ್ಯ ಕೂಡ ನೀಡುವುದಾಗಿ ಹೇಳಿದ್ದಾರೆ ಎಂದು ಮತ್ತೊಬ್ಬ ಸಪರ್ಂಚ್ ಶ್ರೀನಗರ ಜಿಲ್ಲೆಯ ಹರ್ವಾಣದ ಝುಬರ್ ನಿಶಾದ್ ಭಟ್ ತಿಳಿಸಿದ್ದಾರೆ.
    ಮುಂದಿನ 15-20 ದಿನಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಮೊಬೈಲ್  ಹಾಗೂ ಸ್ಥಿರ ದೂರವಾಣಿ ಸೇವೆಗಳನ್ನು ಮರುಸ್ಥಾಪಿಸಲಾಗುವುದು.
ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಮೇಲೆ ಪ್ರತ್ಯೇಕ ರಾಜ್ಯದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೂಡ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದರು.
         6 ವರ್ಷಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ಪಂಚಾಯತ್ ಚುನಾವಣೆ ನಡೆದಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries