ಕುಂಬಳೆ: ಕೇರಳ ರಾಜ್ಯ ಸಾಕ್ಷರತಾ ಮಿಶನ್‍ನ ಆಶ್ರಯದಲ್ಲಿ ನಡೆಸಲಾಗುವ ಹಸಿರು ಮಲೆಯಾಳ ಸರ್ಟಿಫಿಕೆಟ್ ಕೋರ್ಸ್ ಪುತ್ತಿಗೆ ಗ್ರಾಮ ಪಂಚಾಯಿತಿನಲ್ಲಿ ಆರಂಭಗೊಂಡಿದೆ. ಪುತ್ತಿಗೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಪಂಚಾಯಿತಿ ಅಧ್ಯಕ್ಷೆ ಅರುಣ ಜೆ. ಉದ್ಘಾಟಿಸಿದರು. ಪಂಚಾಯಿತಿ ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಿ ವೈ. ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ಜಯಂತಿ, ಹೇಮಾವತಿ ಶುಭಾಶಂಸನೆಗೈದರು. ಅಧ್ಯಾಪಕ ಸುಧೀರ್ ತರಗತಿ ನಡೆಸಿದರು. ಪ್ರೇರಕ್‍ಗಳಾದ ಲಕ್ಷ್ಮೀ, ಸಾವಿತ್ರಿ, ನಿರ್ಮಲ ಕುಮಾರಿ ಉಪಸ್ಥಿತರಿದ್ದರು. ಪ್ರೇರಕ್ ಸಾವಿತ್ರಿ ಸ್ವಾಗತಿಸಿ, ನಿರ್ಮಲ ಕುಮಾರಿ ವಂದಿಸಿದರು. ಮೂವತ್ತು ಮಂದಿ ಕಲಿಕೆದಾರರು ಭಾಗವಹಿಸಿದರು.
ಹಸಿರು ಮಲೆಯಾಳ ಸರ್ಟಿಫಿಕೆಟ್ ಕೋರ್ಸ್
0
ಸೆಪ್ಟೆಂಬರ್ 02, 2019