ಕುಂಬಳೆ: ಮುಳ್ಳೇರಿಯ ಮಂಡಲಾರ್ಗತ ಹವ್ಯಕ ಕುಂಬಳೆ ವಲಯದ ಮಾಸಿಕ ಸಭೆಯು ಕುಂಬಳೆ ಕೃಷ್ಣ ನಗರದಲ್ಲಿರುವ ಡಾ.ಡಿ.ಪಿ. ಭಟ್ ರವರ 'ಅಶ್ವಿನಿ' ನಿಲಯದಲ್ಲಿ ವಲಯ ಅಧ್ಯಕ್ಷ ಬಾಲಕೃಷ್ಣ ಶರ್ಮರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ವಲಯ ಕಾರ್ಯದರ್ಶಿ ಯಸ್. ಗೋಪಾಲಕೃಷ್ಣ ಭಟ್ ಸಭಾ ವರದಿ ಹಾಗೂ ಕೋಶಾಧಿಕಾರಿ ಡಿ.ಸರ್ವೇಶ್ ಕುಮಾರ್ ಇವರು ಲೆಕ್ಕಪತ್ರವನ್ನು ಮಂಡಿಸಿದರು. ಘಟಕ ಪ್ರಮುಖರು ಘಟಕ ವರದಿಯನ್ನು, ವಿಭಾಗ ಪ್ರಮುಖರು ವಿಭಾಗಗಳ ವರದಿಯನ್ನು ನೀಡಿದರು. ಮಂಡಲ ಮಾಹಿತಿ ಹಾಗೂ ಮಠದ ಸುತ್ತೋಲೆಯನ್ನು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಯವರು ನೀಡಿದರು.
ವಲಯದ ಪ್ರತಿಭಾವಂತ ವಿದ್ಯಾರ್ಥಿಗಳ ಪೈಕಿ ಸಭೆಯಲ್ಲಿ ಹಾಜರಿದ್ದ ಶಂಕರನಾರಾಯಣ ಪ್ರಸಾದ ಇವರನ್ನು ಸಭೆಯಲ್ಲಿ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.
ಮಾತೃತ್ವಂ ಮತ್ತು ವೇದ ವೇದಾಂಗ ಇವುಗಳ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿಯನ್ನು ನೀಡಿದರಲ್ಲದೆ ಶ್ರೀ ಗುರುಗಳ ಚಾತುರ್ಮಾಸ್ಯ ಸಂದರ್ಭದಲ್ಲಿ ನಮ್ಮ ವಲಯ ಭಿಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಪೇಕ್ಷಿಸಿದರು.
ಉಪಾಧ್ಯಕ್ಷರಾದ ಪದ್ಮಾವತಿ ಡಿ.ಪಿ.ಭಟ್ ಇವರು ಮಾತೃತ್ವ ಮತ್ತು ಮಾಸದ ಮಾತೆಯರು ಇದರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿ ವಲಯದ ಎಲ್ಲಾ ಮಾತೆಯರೂ ಮಾಸದ ಮಾತೆಯರಾಗಲು ಕರೆ ನೀಡಿದರು.
ಧ್ವಜಾರೋಹಣ, ಗುರುವಂದನೆ, ಗೋವಂದನೆ, ಶ್ರೀ ಲಕ್ಷ್ಮಿನ್ರಸಿಂಹ ಕರಾವಲಂಬ ಸ್ತೋತ್ರ ಹಾಗೂ ಶಂಖನಾದದೊಂದಿಗೆ ಸಭೆ ಪ್ರಾರಂಭ ಮಾಡಿ ದ್ವಜಾವರೋಹಣ, ಶಂಖನಾದ ಶಾಂತಿಮಂತ್ರ ಹಾಗೂ ಶ್ರೀರಾಮ ತಾರಕ ಮಂತ್ರದೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.