ಕಾಸರಗೋಡು: ಎರ್ನಾಕುಳಂ ಕೊಚ್ಚಿಯ ಕನ್ನಡ ಸಂಘ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವನಿಕ ಶ್ರೀಗಣೇಶೋತ್ಸವದ ಅಂಗವಾಗಿ ಇಂದು(ಗುರುವಾರ) ಸಂಜೆ 7 ರಿಂದ ಕಾಸರಗೋಡಿನ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಕವಿ-ಕಲಾವಿದರಿಂದ ಸಾಹಿತ್ಯ ಸಂಭ್ರಮ ಪ್ರಸ್ತುತಿಗೊಳ್ಳಲಿದೆ.
ಕೊಚ್ಚಿಯ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನಿರ್ದೇಶಕ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ವೇದಿಕೆಯ ಸಂಯೋಜಕ ಸುಭಾಶ್ ಪೆರ್ಲ, ಪತ್ರಕರ್ತ ಪುರುಷೋತ್ತಮ ಭಟ್ ಕೆ., ಕವಯಿತ್ರಿಯರಾದ ಚೇತನಾ ಕುಂಬಳೆ, ಶ್ವೇತಾ ಕಜೆ, ಗಾಯಕ ವಸಂತ ಬಾರಡ್ಕ, ಕವಯಿತ್ರಿ ಸವಿತಾ ಆರ್.ಶೆಟ್ಟಿ, ಪ್ರೇಮಲತಾ ಟಿ.ಕೆ, ಬಹುಮುಖ ಪ್ರತಿಭೆ, ಡ್ರಾಮಾ ಜ್ಯೂನಿಯರ್ಸ್ ಬಹುಮಾನಿತ ಮಾಸ್ಟರ್ ಅನೂಪ್ ರಮಣ ಶರ್ಮ ಮುಳ್ಳೇರಿಯ, ಕವಿಗಳಾದ ರಿತೇಶ್ ಕಿರಣ್ ಕಾಟುಕುಕ್ಕೆ, ಪ್ರೇಮಾ, ಅಕ್ಷತಾ ಭಟ್ ಪುದುಕೋಳಿ, ಮಧುರಕಾನನ ಗಣಪತಿ ಭಟ್ ಮೊದಲಾದವರು ಭಾಗವಹಿಸುವರು. ಕವಯಿತ್ರಿ ಪರಿಣಿತ ರವಿ ಎಡನಾಡು ಅವರು ಕಾರ್ಯಕ್ರಮ ಸಂಯೋಜಿಸುವರು.