HEALTH TIPS

ಯಕ್ಷಗಾನದ ಉಭಯ ತಿಟ್ಟುಗಳ ಒಳನೋಟಗಳ ನಿರಂತರ ಸಂಶೋಧನೆ ಆಪ್ಯಾಯಮಾನಗೊಳಿಸುತ್ತದೆ-ಡಾ.ಶಿವರಾಮ ಶೆಟ್ಟಿ-ಭಾಗವತ ಸತೀಶ ಪುಣಿಚಿತ್ತಾಯರ ಸಂಶೋಧನಾ ಪ್ರಬಂಧದ ಮುಕ್ತ ಪರೀಕ್ಷೆಯಲ್ಲಿ ಅಭಿಮತ

                 
       ಕಾಸರಗೋಡು: ಸಂಶೋಧನೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳ್ಳದೆ ಇರವಿನ ಬಗೆಗಿನ ಅರಿವಿಗೆ, ಅರಿವಿನಿಂದ ಇನ್ನೊಂದು ತೊಡಗಿಸುವಿಕೆಗೆ ಕಾರಣವಾಗಬೇಕು. ನಿರಂತರ ಹುಡುಕಾಟಕ್ಕೆ ಪ್ರೇರಣೆ ನೀಡುವ ಸಂಶೋಧನೆಗಳು ನಿರಂತರ ಪ್ರಕ್ರಿಯೆಗಳಾಗಿದ್ದು, ಸ್ವ ವಿಮರ್ಶಾತ್ಮಕವಾಗಿ ಮುಂದುವರಿಯಬೇಕು ಎಂದು ಪೆರಿಯ ಕೇಂದ್ರೀಯ ವಿದ್ಯಾಲಯದ ಕನ್ನಡ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಶಿವರಾಮ ಶೆಟ್ಟಿ ಅವರು ತಿಳಿಸಿದರು.
      ಖ್ಯಾತ ಯಕ್ಷಗಾನ ಭಾಗವತ, ಶಿಕ್ಷಕ ಸತೀಶ ಪುಣಿಚಿತ್ತಾಯ ಪೆರ್ಲ ಅವರು ಮಂಡಿಸಲಿರುವ ಯಕ್ಷಗಾನ ಭಾಗವತಿಕೆಯ ತೌಲನಿಕ ಅಧ್ಯಯನ(ತೆಂಕು-ಬಡಗು) ಮಹಾ ಅಧ್ಯಯನ ಪ್ರಬಂಧದ ಪೂರ್ವಭಾವಿಯಾಗಿ ಸೋಮವಾರ ವಿದ್ಯಾನಗರ ಚಾಲದಲ್ಲಿರುವ  ಕಣ್ಣೂರು ವಿವಿ ಕ್ಯಾಂಪಸ್ ನಲ್ಲಿ ನಡೆದ ಮುಕ್ತ ಸಮರ್ಥೀಕರಿಸುವ ಪರೀಕ್ಷೆಯಲ್ಲಿ ನಡೆಸಿದ ಸಂವಾದದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     ಯಕ್ಷಗಾನ ಕಲಾ ಪ್ರಕಾರದೊಳಗಿನ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಮೊದಲಾದ ಪ್ರಭಾವಗಳು, ಸಾಧಕ-ಬಾಧಕಗಳ ಬಗ್ಗೆ ಸಮರ್ಥನೀಯವಾಗಿ ವಿಷಯ ಮಂಡನೆಗೈಯ್ಯಲಾದ ಈ ಉದ್ಗ್ರಂಥ ಮುಂದಿನ ಹೆಜ್ಜೆಗಳಿಗೆ ಕೈದೀವಿಗೆಯಾಗಬಲ್ಲದು. ನಿರಂತರ, ಪ್ರಕ್ರಿಯಾತ್ಮಕವಾದ ಸಂಶೋಧನಾ ಮಜಲುಗಳಿಗೆ ತೊಡಗಿಸಿಕೊಳ್ಳುವಲ್ಲಿ ಕನ್ನಡ ಭಾಷೆ, ಇಲ್ಲಿಯ ಸಾಂಸ್ಕøತಿಕತೆ ವಿಸ್ಕøತ ಅವಕಾಶಗಳೊಂದಿಗೆ ತೆರೆದುಕೊಂಡಿದೆ ಎಂದು ಅವರು ವಿಶ್ಲೇಶಿಸಿದರು. ಯಕ್ಷಗಾನದ ಉಭಯ ತಿಟ್ಟುಗಳ ನಡುವಿನ ಸಾಮ್ಯತೆ, ಭಿನ್ನತೆ, ಪರಂಪರೆಯ ಒಳನೋಟಗಳು ವಿಶಾಲ ದೃಷ್ಟಿಯ ಪರಿಕಲ್ಪನೆಯಡಿ ನಿರಂತರ ಸಂಶೋಧನೆಗಳಿಗೆ ಒಳಗಾದಾಗ ಅದರೊಳಗಿನ ಸುಂದರ ಪರಿಕಲ್ಪನೆ ಇನ್ನಷ್ಟು ಆಪ್ಯಾಯತೆಯೊದಗಿಸುತ್ತದೆ. ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿ, ಪರಂಪರೆಯ ಶ್ರೀಮಂತಿಕೆ ಅಪೂರ್ವವಾಗಿ ಎಂದಿಗೂ ಸ್ತುತ್ಯರ್ಹ ಎಂದು ಅವರು ತಿಳಿಸಿದರು.
 
     ಸತೀಶ ಪುಣಿಚಿತ್ತಾಯರ ಸಂಶೋಧನಾ ಮಾರ್ಗದರ್ಶಿ, ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥ ಡಾ.ಉಪ್ಪಂಗಳ ಶಂಕರನಾರಾಯಣ ಭಟ್, ಪ್ರೊ.ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ, ಪ್ರೊ.ಎ.ಶ್ರೀನಾಥ್, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಧಾಕೃಷ್ಣ ಬೆಳ್ಳೂರು, ಡಾ.ರತ್ನಾಕರ ಮಲ್ಲಮೂಲೆ, ಡಾ.ಬಾಲಕೃಷ್ಣ ಹೊಸಂಗಡಿ, ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತಾ, ದಿನೇಶ್, ಮಂಜೇಶ್ವರ ಗೋವಿಂದ ಪೈ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಲಕ್ಷ್ಮೀ, ಪೆರ್ಲ ಶಾಲಾ ಶಿಕ್ಷಕ ಉದಯಶಂಕರ ಅಮೈ,ಮಂಗಳೂರಿನ ಉಪನ್ಯಾಸಕ ಡಾ.ಶ್ರೀಕೃಷ್ಣ ಸುಣ್ಣಂಗುಳಿ, ಸಮೃದ್ದ ಪುಣಿಚಿತ್ತಾಯ, ಅರವಿಂದಕುಮಾರ ಅಲೆವೂರಾಯ ಮೊದಲಾದವರು ಸಂವಾದದಲ್ಲಿ ಭಾಗವಹಿಸಿದರು.  ಕಣ್ಣಭೂರು ವಿವಿಯ ಚಾಲ ಕನ್ನಡ ವಿಭಾಗ ಮುಖ್ಯಸ್ಥ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಸಮನ್ವಯಕಾರರಾಗಿ ಸಹಕರಿಸಿದರು. ಪ್ರಬಂಧ ಮಂಡಿಸಲಿರುವ ಸತೀಶ ಪುಣಿಚಿತ್ತಾಯ ಪೆರ್ಲ ಸಂವಾದದಲ್ಲಿ ಉತ್ತರಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries