ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವವು ಸೆ.29ರಿಂದ ಅ.8ರ ತನಕ ಶ್ರೀದೇವಿಯ ವಿಶೇಷ ಆರಾಧನೆ ಮತ್ತು ಸಂತರ್ಪಣೆಯೊಂದಿಗೆ ಜರಗಲಿರುವುದು. ಪ್ರತೀದಿನ ಸಂಜೆ 6ರಿಂದ 8ರ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು. ಸೆ.29ರಂದು ಪೊಡಿಪ್ಪಳ್ಳ ಶ್ರೀ ಭಗವತೀ ಭಜನ ಸಂಘ, 30ರಂದು ಮಾರ್ಪನಡ್ಕ ಜಯನಗರ ಶ್ರೀ ಮಹಮ್ಮಾಯಿ ಭಜನ ಸಂಘದವರಿಂದ, ಅ.1ರಂದು ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಸಂಘದವರಿಂದ, ಅ.2ರಂದು ಬೆಳಗ್ಗೆ 10ರಿಂದ 12ರ ತನಕ ಸಾವಿತ್ರಿದೊಡ್ಡಮಾಣಿ ಮತ್ತು ಶಿಷ್ಯವೃಂದದವರಿಂದ ಶಾಸ್ತ್ರೀಯ ಸಂಗೀತ, ಸಾಯಂಕಾಲ ಅಗಲ್ಪಾಡಿ ಶ್ರೀ ದುರ್ಗಾ ಭಜನ ಸಂಘದವರಿಂದ ಭಜನೆ ಜರಗಲಿದೆ. ಅ.3ರಂದು ಬೆಳಿಗ್ಗೆ 10ರಿಂದ ಬದಿಯಡ್ಕ ಸುನಾದ ಸಂಗೀತ ಕಲಾಶಾಲೆಯ ವಿದುಷಿ ವಾಣೀಪ್ರಸಾದ್ ಕಬೆಕೋಡು ಇವರಿಂದ ಸಂಗೀತ ಕಚೇರಿ, ಸಂಜೆ ಮಾವಿನಕಟ್ಟೆ ದ್ವಾರಕಾನಗರ ಶ್ರೀ ಅಯ್ಯಪ್ಪ ಭಜನ ಸಂಘದವರಿಂದ ಭಜನೆ, ಅ.4ರಂದು ಉಬ್ರಂಗಳ ಶ್ರೀ ಧರ್ಮಶಾಸ್ತಾ ಭಜನ ಸಂಘದವರಿಂದ ಭಜನೆ, ಅ.5ರಂದು ಸಜಂಗದ್ದೆ ರಶ್ಮಿ ಶ್ರೀನಿವಾಸ್ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸಾಯಂಕಾಲ ಅಡೂರು ಶ್ರೀಪ್ರಿಯಾ ಮಹಿಳಾ ಭಜನ ಮಂಡಳಿಯವರಿಂದ ಭಜನೆ, ಅ.6ರಂದು ಬೆಳಿಗ್ಗೆ 10ರಿಂದ ಜಿ.ಕೃಷ್ಣಾನಂದ ಉಪ್ಪಂಗಳ ಇವರಿಂದ ಕೊಳಲುವಾದನ, 11ರಿಂದ ಕುಮಾರಿ ಪ್ರಾರ್ಥನಾ ಬಲೆಕ್ಕಳ ಇವರಿಂದ ವಯಲಿನ್ ವಾದನ, ಸಂಜೆ ಶ್ರೀ ಅನ್ನಪೂರ್ಣಾ ಕರಾಡ ಭಜನ ಮಂಡಳಿ ಅಗಲ್ಪಾಡಿ ಇವರಿಂದ ಭಜನೆ, ಅ.7ರಂದು ವಿದ್ಯಾಶ್ರೀ ಸಂಗೀತ ಸಭಾ ಮುಳ್ಳೇರಿಯ ಇದರ ವಿದ್ಯಾರ್ಥಿಗಳಿಂದ ಸಂಗೀತಾರಾಧನೆ, ಸಂಜೆ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಸಂಘದವರಿಂದ ಭಜನೆ, ಅ.8ರಂದು ಬೆಳಿಗ್ಗೆ 10ರಿಂದ 12ರ ತನಕ ಯಕ್ಷಮಿತ್ರರು ಮುಜುಂಗಾವು ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿದೆ.
ನವರಾತ್ರಿಯ ಪಾಡ್ಯದಿಂದ ನವಮಿಯ ದಿನದವೆಗೆ ಒಂಭತ್ತು ದಿನಗಳಲ್ಲಿ ತುಲಾಭಾರ ಸೇವೆಯೂ ನಡೆಯಲಿರುವುದು. ಅ.7 ನವಮಿಯಂದು ಪೂರ್ವಾಹ್ನ 8 ಗಂಟೆಗೆ ಶ್ರೀ ದೇವರಿಗೆ ನವಾನ್ನ ಸಮರ್ಪಣೆ ನಡೆಯಲಿರುವುದು. 9 ಗಂಟೆಯಿಂದ ಆಯುಧಪೂಜೆ, ಅ.8 ದಶಮಿಯಂದು ಪೂರ್ವಾಹ್ನ 8 ಗಂಟೆಯಿಂದ ವಿದ್ಯಾರಂಭವೂ ನಡೆಯಲಿರುವುದು. ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.