ಪೆರ್ಲ: ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಸೆ.4ರಂದು ಎಣ್ಮಕಜೆ ಪಂಚಾಯಿತಿ ಮಟ್ಟದ ಕನ್ನಡಿಗರ ಸಭೆ ಸಂಜೆ 3.30 ಗಂಟೆಗೆ ಶ್ರೀ ಸತ್ಯನಾರಾಯಣ ಪ್ರೌಢ ಶಾಲಾ ಪರಿಸರದಲ್ಲಿ ಸಭೆ ಜರಗಲಿದೆ.
ಕನ್ನಡಿಗರನ್ನು ರಾಜಕೀಯೇತರವಾಗಿ ಸಂಘಟಿಸಿಕೊಂಡು ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಭೆ ನಡೆಯಲಿದ್ದು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಶ್ವಿಗೊಳಿಸಬೇಕೆಂದು ಕನ್ನಡರ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.