ನವದೆಹಲಿ: ವಿಶೇಷಚೇತನರಿಗೆ ಅವರ ಮೂಲಭೂತ ಹಕ್ಕಿನ ಭಾಗವಾಗಿ ಉದ್ಯೋಗಾವಕಾಶ ನೀಡಬೇಕೆ ಹೊರತು ಅನುಕಂಪದ ಆಧಾರದ ಮೇಲೆ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Á್ಯಯಮೂರ್ತಿಗಳಾದ ಆರ್ ಬಾನುಮತಿ ಮತ್ತು ಎ ಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ರಾಜಸ್ತಾನ ಹೈಕೋರ್ಟ್ ನೀಡಿದ ಆದೇಶವನ್ನು ಬದಿಗೊತ್ತಿ, ವಿಶೇಷ ಚೇತರಿಗೆ ಕಾಯ್ದಿರಿಸಿದ ಸಿವಿಲ್ ಜಡ್ಜ್ ಹುದ್ದೆಗೆ ಸಾಮಾನ್ಯ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದರೆ ಅದೇ ಆಧಾರದ ಮೇಲೆ ಹುದ್ದೆ ನೀಡುವಂತೆ ರಾಜಸ್ತಾನ ಸರ್ಕಾರಕ್ಕೆ ಆದೇಶಿಸಿತು.
ಸಿವಿಲ್ ಜಡ್ಜ್ ಹುದ್ದೆಗೆ ಅರ್ಜಿ ಸಲ್ಲಿಸಿದ ನೀತು ಹರ್ಷ ದೃಷ್ಟಿದೋಷವನ್ನು ಹೊಂದಿದ್ದು ತನ್ನ ಅರ್ಜಿಯಲ್ಲಿ ಸಾಮಾನ್ಯ ಅಭ್ಯರ್ಥಿ ಎಂದೇ ನಮೂದಿಸಿದ್ದರು. ಪರೀಕ್ಷೆಯ ಮೊದಲ ಹಂತದಲ್ಲಿ ತೇರ್ಗಡೆ ಹೊಂದಿದ ನಂತರ ಮುಖ್ಯ ಪರೀಕ್ಷೆಗೆ ಹಾಜರಾಗಿ ನಂತರ ಸಾಮಾನ್ಯ ಅಭ್ಯರ್ಥಿಯಾಗಿಯೇ ಸಂದರ್ಶನದಲ್ಲಿ ಭಾಗವಹಿಸಿದ್ದರು. ತಾನು ವಿಶೇಷಚೇತನ ಅಭ್ಯರ್ಥಿ ಎಂದು ಪ್ರಮಾಣಪತ್ರವನ್ನು ಸಹ ನೀಡಲಿಲ್ಲ.
ಅಭ್ಯರ್ಥಿಗಳ ಅಂಕಗಳೆಲ್ಲ ಬಂದ ಮೇಲೆ ಹರ್ಷ ಅವರಿಗೆ 136 ಅಂಕ ಸಿಕ್ಕಿದ್ದು ಕ್ರಮಸಂಖ್ಯೆ 137ರಲ್ಲಿದ್ದರು. ಎರಡು ಸೀಟುಗಳು ವಿಶೇಷಚೇತನರಿಗೆ ಮೀಸಲಾಗಿದ್ದವು. ಮತ್ತೊಬ್ಬ ಅರ್ಜಿದಾರ 138 ಅಂಕ ಗಳಿಸಿದವರು ಕ್ರಮಸಂಖ್ಯೆ 57ರಲ್ಲಿದ್ದರು.
ತಮ್ಮ ಪ್ರಾತಿನಿಧ್ಯವನ್ನು ವಿಶೇಷಚೇತನ ವಿಭಾಗದಲ್ಲಿ ಪರಿಗಣಿಸುವಂತೆ ಹರ್ಷ ಮನವಿ ಮಾಡಿದರು, ಆದರೆ ಅವರ ಮನವಿಯನ್ನು ತಿರಸ್ಕರಿಸಲಾಯಿತು. ಇದರಿಂದ ಹರ್ಷ ಹೈಕೋರ್ಟ್ ಮೊರೆ ಹೋದರು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಹರ್ಷ ಅವರಿಂದ ತಪ್ಪಾದರೂ ಕೂಡ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡುವಂತೆ ಆದೇಶ ನೀಡಿತು.