ನವದೆಹಲಿ: ನಿನ್ನೆ ಪ್ರಕಟವಾಗಿರುವ ಎನ್ ಆರ್ ಸಿ ಪಟ್ಟಿಯ ಬಗ್ಗೆ ಅಸ್ಸಾಂ ನ ಮಾಜಿ ಸಿಎಂ ತರುಣ್ ಗೊಗೋಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಲಕ್ಷಾಂತರ ಭಾರತೀಯರನ್ನು ಎನ್ ಆರ್ ಸಿ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂದು ಆರೋಪಿಸಿರುವ ತರುಣ್ ಗೊಗೋಯ್ ಭಾರತೀಯರನ್ನು ಹೊರಕ್ಕೆ ಹಾಕಿ, ವಿದೇಶಿಗರನ್ನು ಒಳಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ನೈಜ ಭಾರತೀಯರನ್ನು ಪಟ್ಟಿಯಿಂದ ಹೊರಗಿಡಲಾಗಿದೆ, ಪ್ರಮುಖವಾಗಿ ಬಂಗಾಳಿ ಹಿಂದೂಗಳನ್ನು ಹೊರಗಿಡಲಾಗಿದೆ. ಹಲವು ವಿದೇಶಿಗರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಎನ್ ಆರ್ ಸಿಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಬಿಜೆಪಿ ವಿವರಿಸಬೇಕೆಂದು ಎನ್ ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತರುಣ್ ಗೊಗೋಯ್ ಹೇಳಿದ್ದಾರೆ.