ಕುಂಬಳೆ: ನಾಯ್ಕಾಪಿನಲ್ಲಿ ಅಖಂಡ ಭಜನಾ ಸಪ್ತಾಹ ಡಿ.7 ರಿಂದ 14ರ ವರೆಗೆ ನಡೆಯಲಿದ್ದು, ಸ್ಥಳೀಯ ನಾಯ್ಕಾಪು ಸಾರ್ವಜನಿಕ ಏಕಾಹ ಭಜನಾ ಸಮಿತಿಯ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಹೋರಾತ್ರಿ ನಡೆಯುವ ಭಜನಾ ಸಪ್ತಾಹವನ್ನು ಯಶಸ್ವಿಗೊಳಿಸುವರೆ ಇತ್ತೀಚೆಗೆ ಜರಗಿದ ವಿವಿಧ ಭಜನಾ ಸಂಘಗಳ ಸಂಘ-ಸಂಸ್ಥೆಗಳ ನಾಗರಿಕರ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕ ಏಕಾಹ ಭಜನಾ ಸಮಿತಿಯ 18 ನೇ ವಾರ್ಷಿಕದ ಪ್ರಯುಕ್ತ ಈ ಬಾರಿ ಅಖಂಡ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಈ ಬಗ್ಗೆ ಜರಗಿದ ಸಭೆಯಲ್ಲಿ ಧಾರ್ಮಿಕ ಮುಖಂಡ ಹರಿಶ್ಚಂದ್ರ ಪುರೋಹಿತ, ಶಂನಾ ಅಡಿಗ ಕುಂಬಳೆ, ಮುರಳೀಧರ ಯಾದವ್ ಮೊದಲಾದವರು ಭಾಗವಹಿಸಿ ಮಾರ್ಗದರ್ಶನ ನೀಡಿದರು.
ಅಖಂಡ ಭಜನಾ ಸಮಿತಿಯ ಅಧ್ಯಕ್ಷರಾಗಿ ಕಿಶನ್ ಕುಮಾರ್, ಕಾರ್ಯದರ್ಶಿಯಾಗಿ ಮುರಳೀಧರ ಯಾದವ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ.ಕೆ. ಭಟ್, ಜೊತೆ ಕಾರ್ಯದರ್ಶಿಯಾಗಿ ನಮಿತ್ ಕುಮಾರ್, ಕೋಶಾಧಿಕಾರಿಯಾಗಿ ಅಶೋಕ ಬಾಡೂರು, ಮಾರ್ಗದರ್ಶಕ ಮಂಡಳಿ ಸದಸ್ಯರಾಗಿ ಅಪ್ಪಣ್ಣ ಮಾಸ್ತರ್, ಹರಿಶ್ಚಂದ್ರ ಪುರೋಹಿತ್, ಶಂಕರ ಪ್ರಸಾದ್, ಶಂನಾ ಅಡಿಗ, ರಾಮಚಂದ್ರ ಮಾಸ್ತರ್, ಸತ್ಯ ಶಂಕರ ಭಟ್, ಎಂ. ಸೀತಾರಾಮ, ದಯಾನಂದ ಮುಜುಂಗಾವು ಅವರನ್ನು ಆರಿಸಲಾಯಿತು. ನಮಿತ್ ಕುಮಾರ್ ಸ್ವಾಗತಿಸಿ, ವಂದಿಸಿದರು.