ಬದಿಯಡ್ಕ: ಅನ್ಯಾಯವನ್ನು ನಿಗ್ರಹಿಸಿ ಧರ್ಮವನ್ನು ಸ್ಥಾಪಿಸುವ ಸಲುವಾಗಿ ಶ್ರೀಕೃಷ್ಣನು ಅವತಾರವನ್ನೆತ್ತಿದ್ದಾನೆ. ಶ್ರೀ ಕೃಷ್ಣನ ಜೀವನದ ಘಟನೆಗಳು ಮನುಷ್ಯ ಜೀವನಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತದೆ. ಶ್ರೀ ಕೃಷ್ಣನ ಸಂದೇಶವು ನಮ್ಮ ಜೀವನದ ಬೆಳಕಾಗಲಿ. ನಮ್ಮ ರಾಷ್ಟ್ರವನ್ನು ಪರಮ ವೈಭವ ಸ್ಥಿತಿಯತ್ತ ಕೊಂಡೊಯ್ಯೋಣ ಎಂದು ಬಾಲಗೋಕುಲ ತಾಲೂಕು ಪ್ರಮುಖ್ ನಾರಾಯಣ ಮಾಸ್ತರ್ ಹೇಳಿದರು.
ನೀರ್ಚಾಲು ಸಮೀಪದ ಕುಂಟಿಕಾನ ಭಾರತಾಂಬಾ ಸೇವಾಟ್ರಸ್ಟ್, ಭಾರತಾಂಬಾ ಸ್ವಸಹಾಯ ಸಂಘ, ಹರಿಶ್ರೀ ಬಾಲಗೋಕುಲ, ಶ್ರೀ ಹರಿ ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಓಣಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭಾನುವಾರ ಕುಂಟಿಕಾನ ಶಾಲಾ ವಠಾರದಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀ ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ಗೋಪಾಲ ಮಣಿಯಾಣಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ಧನಂಜಯ ಮಧೂರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ಹಿಂದೂ ಸಂಸ್ಕøತಿಗೆ ಪೂರಕವಾದ ಉತ್ಸವಾದಿಗಳನ್ನು ದೇವಸ್ಥಾನಗಳ ಪರಿಸರದಲ್ಲಿ ಆಚರಿಸಲು ಇಂದು ವಿರೋಧ ವ್ಯಕ್ತವಾಗುತ್ತಿರುವ ಕಾಲಘಟ್ಟದಲ್ಲಿ ನಾವು ಇದ್ದೇವೆ. ನಮ್ಮ ಸಂಸ್ಕøತಿಗೆ ಅಚಲವಾಗಿ ನಾವು ಇರಬೇಕು. ಉತ್ಸವಗಳ ಮೂಲಕ ಹಿಂದುತ್ವದ ಸಂಸ್ಕಾರವನ್ನು ನಮ್ಮ ಯುವ ಪೀಳಿಗೆಗೆ ತಲುಪಿಸಬೇಕು. ಬೆಳೆದು ಬರುತ್ತಿರುವ ನಮ್ಮ ಮಕ್ಕಳಿಗೆ ಸಂಸ್ಕಾರ, ಪುರಾಣಗಳನ್ನು ತಿಳಿಸಿಕೊಡುವಲ್ಲಿ ಬಾಲಗೋಕುಲಗಳು ಕಾರ್ಯಾಚರಿಸುತ್ತಿವೆ.
ಗರ್ಭಾವಸ್ಥೆಯಲ್ಲಿಯೇ ತಾಯಿಯಿಂದ ಶ್ರೀಕೃಷ್ಣ, ಶ್ರೀ ರಾಮರ ಕಥೆಗಳನ್ನು ಕೇಳಿದುದರ ಫಲವಾಗಿ ಚಕ್ರವರ್ತಿ ಶಿವಾಜಿಯಾಗಿ ಮರಾಠ ಸಾಮ್ರಾಜ್ಯವನ್ನು ಕಟ್ಟಿದ ಮಹಾನ್ ವ್ಯಕ್ತಿತ್ವದ ಬಾಲಕರು ನಮ್ಮಲ್ಲಿ ಸೃಷ್ಟಿಯಾಗಬೇಕು ಎಂದರು.
ಕನ್ನೆಪ್ಪಾಡಿ `ಆಶ್ರಯ'ದ ವ್ಯವಸ್ಥಾ ಪ್ರಮುಖ್ ರಮೇಶ್ ಶುಭಹಾರೈಸಿದರು. ನಿವೃತ್ತ ಅಧ್ಯಾಪಕ ಅಣ್ಣಪ್ಪ ಮಾಸ್ತರ್ ಅಣಬೈಲು ಅವರನ್ನು ಸಮ್ಮಾನಿಸಲಾಯಿತು. ವಿವಿಧ ಬೌದ್ಧಿಕ ಹಾಗೂ ಶಾರೀರಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಂಘಟಕರಾದ ಗಣಪತಿ ಪ್ರಸಾದ ಕುಳಮರ್ವ ಸ್ವಾಗತಿಸಿ, ಸರಳಿ ಮಹೇಶ್ ವಂದಿಸಿದರು. ಕಿಶೋರ ದೇವರಮೆಟ್ಟು ಕಾರ್ಯಕ್ರಮ ನಿರೂಪಿಸಿದರು.