HEALTH TIPS

ಕುಂಟಿಕಾನದಲ್ಲಿ ಓಣಂ, ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ- ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಊರವರಿಂದ ಸಂಭ್ರಮಾಚರಣೆ

     
        ಬದಿಯಡ್ಕ: ನೀರ್ಚಾಲು ಸಮೀಪದ ಕುಂಟಿಕಾನ ಭಾರತಾಂಬಾ ಸೇವಾಟ್ರಸ್ಟ್, ಭಾರತಾಂಬಾ ಸ್ವಸಹಾಯ ಸಂಘ, ಹರಿಶ್ರೀ ಬಾಲಗೋಕುಲ, ಶ್ರೀಹರಿ ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಓಣಂ ಹಬ್ಬದ ಆಚರಣೆ ಭಾನುವಾರ ಕುಂಟಿಕಾನ ಶಾಲಾ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
   ಬೆಳಿಗ್ಗೆ ನಡೆದ ಸಭಾಕಾರ್ಯಕ್ರಮವನ್ನು ಕುಂಟಿಕಾನ ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಾಜ ವಾಶೆ ದೀಪಜ್ವಲನೆಗೈದು ಉದ್ಘಾಟಿಸಿ ಮಾತನಾಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಅವರಿಗೆ ಲಭಿಸಬೇಕಿದೆ. ಭಾರತೀಯ ಸಂಸ್ಕøತಿಯನ್ನು ಗೌರವಿಸಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡಬೇಕಾಗಿದೆ. ಇಂದಿನ ಮಕ್ಕಳು ನಾಳಿನ ಸತ್ಪ್ರಜೆಗಳಾಗಿ, ದೇಶವನ್ನು ಪ್ರೇಮಿಸುವ ಭಾರತದ ಪ್ರಜೆಗಳಾಗಿ ಬದುಕುವಂತಾಗಬೇಕು ಎಂದರು.
      ಬದಿಯಡ್ಕ ಗ್ರಾಮಪಂಚಾಯಿತಿ ಸದಸ್ಯೆ ಜಯಂತಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಹಬ್ಬಗಳ ಆಚರಣೆಯ ಹೆಸರಿನಲ್ಲಿ ಊರವರು ಒಂದುಗೂಡುತ್ತಾರೆ. ಜನತೆಯ ಒಗ್ಗಟ್ಟು ಊರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಲ್ಲದೆ ಸಕಾರಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಎಂದರು. ಬಡಗಮೂಲೆ ರಕ್ತೇಶ್ವರಿ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ವಾಮನ ಆಚಾರ್ಯ, ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ಗೋಪಾಲ ಮಣಿಯಾಣಿ ಉಪಸ್ಥಿತರಿದ್ದರು. ಭಾರತಾಂಬಾ ಸ್ವಸಹಾಯ ಸಂಘದ ಕೋಶಾಧಿಕಾರಿ ಗಣಪತಿ ಪ್ರಸಾದ ಕುಳಮರ್ವ ಸ್ವಾಗತಿಸಿದರು. ಭಾರತಾಂಬಾ ಸ್ವಸಹಾಯ ಸಂಘದ ಕಾರ್ಯದರ್ಶಿ ಕಿಶೋರ್ ಕುಮಾರ್ ದೇವರಮೆಟ್ಟು ನಿರೂಪಿಸಿದರು.
    ಬಳಿಕ ನಡೆದ ವಿವಿಧ ಸ್ಫರ್ಧೆಗಳಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡರು. ಭಗವದ್ಗೀತೆ, ದೇಶಭಕ್ತಿಗೀತೆ, ಭಕ್ತಿಗೀತೆ, ಸ್ಮರಣಶಕ್ತಿ, ಯೋಗಾಸನ, ಸೂರ್ಯನಮಸ್ಕಾರ ಮಂತ್ರಸಹಿತ ಐಚ್ಛಕ ಮೂರು ಯೋಗ, ಸಂಗೀತ ಕುರ್ಚಿ, ಕೃಷ್ಣನ ಹೆಸರು ಬರೆಯುವ ಸ್ಪರ್ಧೆ, ಮಡಕೆ ಒಡೆಯುವುದು, 2 ಕಿ.ಮೀ.ಓಟ,  ಲಿಂಬೆ ಚಮಚ ಓಟ, ಪುಷ್ಪರಂಗೋಲಿ, ಸಾರ್ವಜನಿಕ ರಸಪ್ರಶ್ನೆಯಲ್ಲಿ ಅನೇಕರು ಪಾಲ್ಗೊಂಡರು. ಸಂಜೆ ಬಾಲಗೋಕುಲದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries