ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಿಂಹ ಮಾಸದ ಎರಡನೇ ಬಲಿವಾಡು ಕೂಟದಂದು ವೇದಮೂರ್ತಿ ಹರಿನಾರಾಯಣ ಕುಂಬ್ಳೆ ಇವರಿಂದ ಶಿವಪುರಾಣ ಪ್ರವಚನ ಮನೋಜ್ಞವಾಗಿ ಜರಗಿತು. ಕಾರ್ಯಕ್ರಮದ ಪ್ರಾಯೋಜಕರಾದ ವೇದಮೂರ್ತಿ ಗಣೇಶ್ ನಾವಡ ಚಿಗುರುಪಾದೆ ಇವರು ಪ್ರವಚನಕಾರರನ್ನು ಸನ್ಮಾನಿಸಿದರು. ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಸೇವಾ ಸಮಿತಿ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ತಲೇಕಳ ವಂದಿಸಿದರು.