ವಾಷಿಂಗ್ಟನ್: ನಿರುದ್ಯೋಗದ ಸಮಸ್ಯೆ ವಿಶ್ವದ ದೊಡ್ಡಣ್ಣ ಅಮೆರಿಕವನ್ನೂ ಕಾಡುತ್ತಿದ್ದು, ಅಲ್ಲಿ ಸಹ ನಿರುದ್ಯೋಗ ಹೆಚ್ಚಿದೆ. ಸರಕಾರದ ಅಂಕಿ ಅಂಶಗಳೇ ಇದನ್ನು ಸಾರಿ ಹೇಳುತ್ತಿವೆ. ಕಾರ್ಮಿಕ ಇಲಾಖೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ ನಿರುದ್ಯೋಗದ ಸಂಖ್ಯೆ ಕಳೆದ ವಾರ ಹೆಚ್ಚಾಗಿದೆ.
ಆಗಸ್ಟ್ ಅಂತ್ಯಗೊಳ್ಳುವ ವಾರದಲ್ಲಿ ನಿರುದ್ಯೋಗ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ 1,000 ರಿಂದ 217,000 ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ನಾಲ್ಕು ವಾರಗಳಲ್ಲಿ ಈ ಪ್ರಮಾಣ ಸರಾಸರಿ 1,500 ರಿಂದ 216,250 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ. ನಿರುದ್ಯೋಗ ಸ್ಥಿತಿಯನ್ನು ಪ್ರತಿಬಿಂಬಿಸುವ ಪ್ರಮುಖ ಸೂಚಕವಾಗಿ, ನಿರುದ್ಯೋಗಕ್ಕೆ ಕಡಿಮೆ ಅರ್ಹತೆ, ಒಟ್ಟಾರೆ ಲೇಆಪ್, ವಜಾಗೊಳಿಸುವಿಕೆಯನ್ನು ಸೂಚಿಸುತ್ತದೆ.