ಬದಿಯಡ್ಕ: ಸಮಾನ ಮನಸ್ಸಿನ ಕನ್ನಡಿಗರು ಒಗ್ಗೂಡಿದರೆ ಕನ್ನಡ ಭಾಷೆ ಉಳಿಯುವುದು ಮಾತ್ರವಲ್ಲ ಸ್ವಚ್ಛಗೊಳಿಸುವುದು. ಕವಿ ಕಯ್ಯಾರರ ಆಶಯದಂತೆ ಕನ್ನಡ ಐಕ್ಯಗಾನ ಮೊಳಗಬೇಕು. ಕನ್ನಡದ ಬೇರು ಗಟ್ಟಿಯಿರಲು ಕನ್ನಡಕ್ಕೆ ಅಳಿವಿಲ್ಲ ಎಂದು ಹಿರಿಯ ಸಾಹಿತಿಗಳು, ಪತ್ರಕರ್ತರು, ಕೇರಳ ತುಳು ಅಕಾಡೆಮಿ ಸದಸ್ಯರೂ ಆದ ರಾಧಾಕೃಷ್ಣ ಕೆ. ಉಳಿಯತಡ್ಕ ಅವರು ಹೇಳಿದರು.
ನವಜೀವನ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕುಂಬಳೆ ಉಪಜಿಲ್ಲಾ ಘಟಕದ ಮಹಾಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಳೆ ಉಪಜಿಲ್ಲಾ ಘಟಕದ ಶ್ರೀಧರ ಕೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಯತೀಶ್ ಕುಮಾರ್ ರೈ, ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ರಾದ ಮಹಾಲಿಂಗೇಶ್ವರ ಭಟ್ ಯಂ ವಿ ಮಾತನಾಡಿದರು.
*ಮೌನಪ್ರಾರ್ಥನೆ*
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಜಿ ಎಚ್ ಎಸ್ ಅಂಗಡಿಮೊಗರಿನ ಮುಖ್ಯೋಪಾಧ್ಯಾಯರಾಗಿದ್ದ ಹಮೀದಾಲಿ
ಹಾಗು ಪೈಕ ಎಕೆ ಎಮ್ ಎಮ್ ಎ ಯು ಪಿ ಶಾಲೆಯ ವ್ಯವಸ್ಥಾಪಕರಾಗಿದ್ದ ಗಂಗಾಧರ ಮಣಿಯಾಣಿ ಇವರ ಅಗ ಲುವಿಕೆಯಲ್ಲಿ ಸಂತಾಪ ಸೂಚಿಸಲು ಒಂದು ನಿಮಿಷದ ಮೌನಪ್ರಾರ್ಥನೆ ನಡೆಸಲಾಯಿತು.
ಎಲ್ ಎಸ್ ಎಸ್ , ಯು ಎಸ್ ಎಸ್ ವಿಜೇತರಿಗೆ ಅಭಿನಂದನೆ:
2018-19 ನೇ ಶೈಕ್ಷಣಿಕ ವರ್ಷದಲ್ಲಿ ಕುಂಬಳೆ ಉಪಾಜಿಲ್ಲೆಯ ಎಲ್ ಎಸ್ ಎಸ್, ಯು ಎಸ್ ಎಸ್ ವಿಜೇತರಿಗೆ ಸಂಘಟನೆಯ ವತಿಯಿಂದ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.
ಉಪಜಿಲ್ಲಾ ಘಟಕದ ಕಾರ್ಯದರ್ಶಿ ಪುಷ್ಪರಾಜ್ ಕೆ ಸ್ವಾಗತಿಸಿದರು. ಕೋಶಾಧಿಕಾರಿ ಯಕ್ಷಿತ ಯು ಬೇಂಗಪದವು ವಂದಿಸಿದರು. ಶರತ್ ಕುಮಾರ್ ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಪ್ರತಿನಿಧಿ ಸಮಾವೇಶದಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಯಂ, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಅಬ್ದುಲ್ ರೆಹಮಾನ್ ಅಂಗಡಿಮೊಗರು ಅಧ್ಯಾಪಕರ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ಸಲಹೆಗಳನ್ನು ನೀಡಿದರು.
ಪದಾಧಿಕಾರಿಗಳ ಆಯ್ಕೆ:
2019-20 ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬೇಂಗಪದವು ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಕುಮಾರ್ ಎಸ್ , ಕಾರ್ಯದರ್ಶಿಯಾಗಿ ಕಾರಡ್ಕ ಶಾಲೆಯ ಶ್ರೀಶಕುಮಾರ ಪಂಜಿತಡ್ಕ ಹಾಗೂ ಕೋಶಾಧಿಕಾರಿಯಾಗಿ ಶರತ್ ಕುಮಾರ್ ಕುಂಟಿಕಾನ ಅವರು ಆಯ್ಕೆಯಾದರು.
ಸದಾಶಿವ ಶರ್ಮ ಸ್ವಾಗತಿಸಿ, ಅಂಕಿತ ಅಗಲ್ಪಾಡಿ ವಂದಿಸಿದರು. ಶರತ್ ಕುಮಾರ್ ಆರ್ ಆದೂರು ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲೆಗಳ ಅಧ್ಯಾಪಕ ಅಧ್ಯಾಪಿಕೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.