ಮುಳ್ಳೇರಿಯ: ಮುಳಿಯಾರು ಶ್ರೀಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಯಕ್ಷ ತುಳು ಪರ್ಬ 2019 ಸಮಾರಂಭವು ಇತ್ತೀಚೆಗೆ ಸಂಪನ್ನಗೊಂಡಿತು.
ಸಮಾರಂಭದ ಅಂಗವಾಗಿ ಜರಗಿದ ಸಭಾಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಟ್ರಸ್ಟಿ ಸೀತಾರಾಮ ಬಳ್ಳುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಪ್ರಸಿದ್ಧ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಯಕ್ಷ ತುಳು ಪರ್ಬ ಸಮಾರಂಭದ ನಿರ್ವಾಹಕ ಡಿ. ಮನೋಹರ ಕುಮಾರ್ ಅವರ ಷಷ್ಟ್ಯಬ್ದಿ ಸಮಾರಂಭದ ಪ್ರಯುಕ್ತ ಅವರಿಗೆ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ಸನ್ನಿಧಿಯಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಶಾಲು ಹೊದೆಸಿ ಸನ್ಮಾನ ಪತ್ರ, ಸ್ಮರಣಿಕೆ, ಫಲವನ್ನಿತ್ತು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಪ್ರಕಟಣಾ ಕಾರ್ಯಗಳಲ್ಲಿ ನಿರಂತರವಾಗಿ ಸಹಕರಿಸುತ್ತಿರುವ ರಾಜೇಶ್ವರಿ ಬಳ್ಳಮೂಲೆ ಇವರನ್ನು ಶ್ರೀ ಕ್ಷೇತ್ರದ ವತಿಯಿಂದ ಫಲ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು.
ಯಕ್ಷ ತುಳು ಪರ್ಬ ಸಮಾರಂಭ ಸಮಿತಿಯ ವತಿಯಿಂದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಮತ್ತು ಯಕ್ಷಗಾನ ಕಲಾವಿದರಾದ ಸೋಮಶೇಖರ ಬಳ್ಳುಳ್ಳಾಯ ಇವರನ್ನು ಸನ್ಮಾನಿಸಲಾಯಿತು. ಭಾಗವತರಾದ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಪ್ರಸಿದ್ದ ಕಲಾವಿದರಿಂದ ತುಳು ಯಕ್ಷಗಾನ ಬಯಲಾಟ ಗೆಜ್ಜೆದ ಪೂಜೆ ಪ್ರದರ್ಶನಗೊಂಡಿತು.