ಮುಳ್ಳೇರಿಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಟಾರು ಇದರ ಆಶ್ರಯದಲ್ಲಿ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆಯುತ್ತಿದ್ದ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಗಳು ಬುಧವಾರ ಮುಕ್ತಾಯಗೊಂಡಿತು.
ಉತ್ಸವ ಮೂರ್ತಿಯನ್ನು ಎಲಿಕ್ಕಳ ಶ್ರೀ ಅಶ್ವಾರೂಢ ದೇವರ ಮನೆಯಿಂದ ತರಲಾಯಿತು. ಕುಂಟಾರು ಶ್ರೀಧರ ತಂತ್ರಿಯವರಿಂದ ಗಣಪತಿ ಹವನ, ಪ್ರತಿಷ್ಠೆ ನಡೆಯಿತು. ಬ್ರಹ್ಮಶ್ರೀ ವಾಸುದೇವ ತಂತ್ರಿಯವರು ಧ್ವಜಾರೋಹಣ ನೆರವೇರಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ.ಯಂ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೇಮಾ ಬಾರಿತ್ತಾಯ ಅಡೂರು ಭಾಗವಹಿಸಿದರು. ಶಿಕ್ಷಕಿ ಇಂದಿರಾಕುಟ್ಟಿ ಕುಂಡಂಗುಳಿ ತಮ್ಮ ಧಾರ್ಮಿಕ ಭಾಷಣದಲ್ಲಿ ನಾವು ನಮ್ಮ ಮನಃಶಾಂತಿಗೆ ನಾಮ ಸಂಕೀರ್ತನೆ ಮಾಡಬೇಕು, ಆಧ್ಯಾತ್ಮಿಕ ವಾತಾವರಣವನ್ನುಂಟುಮಾಡಬೇಕು. ನಮ್ಮ ಸಂಸ್ಕøತಿಯನ್ನು ಅರಿತುಕೊಳ್ಳಬೇಕು. ನಮ್ಮಲ್ಲಿ ರಾಷ್ಟ್ರಪ್ರೇಮ ಬೆಳೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರು ನಾಟಿ ವೈದ್ಯ ಕೆ.ವಿ.ಚಂದು ಅವರನ್ನು ಸನ್ಮಾನಿಸಿದರು ಮತ್ತು ಗಣೇಶೋತ್ಸವ ಸಮಿತಿಯಲ್ಲಿ ದುಡಿದ ಹಿರಿಯರಾದ ಲಕ್ಷ್ಮೀನಾರಾಯಣ ಭಟ್ ಕುಂಟಾರು ಮತ್ತು ಭಾಸ್ಕರ ಮೈಲಂಗಿ ಅವರಿಗೆ ಗೌರವಾರ್ಪಣೆ ಮಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಗೋಕುಲ್‍ಗೆ ಅಭಿನಂದನೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಭಜನಾ ಮಂದಿರ ಸಹಾಯ ನಿಧಿಯ ಕೂಪನ್ ಬಿಡುಗಡೆ ಮಾಡಲಾಯಿತು. ಭಜನಾ ಮಂದಿರದ ಅಧ್ಯಕ್ಷ ಸುದೀಶ್, ಕಾರಡ್ಕ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಉಪಸ್ಥಿತರಿದ್ದರು.
ಯತೀಶ್ ಸ್ವಾಗತಿಸಿ, ಸುನಿಲ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಮೋಹಿನಿ ಹುಣ್ಸೆಡ್ಕ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ಕೂಟ, ಕಲಾರತ್ನ ಶಂ.ನಾ.ಅಡಿಗ ಇವರ ಶಿಷ್ಯಂದಿರಾದ ಕು.ಚೈತ್ರ.ಕೆ.ಟಿ ಮತ್ತು ಕು.ನಿಶ್ರಿತಾ ಭಟ್ ಇವರಿಂದ ಹರಿಕಥಾ ಸತ್ಸಂಗ, ಮಕ್ಕಳಿಂದ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಮಹಿಷಾಸುರ ವಧೆ ಎಂಬ ಯಕ್ಷಗಾನ ಬಯಲಾಟ ನಡೆಯಿತು. ವಿವಿಧ ಭಜನಾ ಸಂಘದವರಿಂದ ಭಜನೆ, ಮಕ್ಕಳಿಂದ ಕುಣಿತ ಭಜನೆ ನಡೆಯಿತು.
ವಿಗ್ರಹ ಜಲಸ್ತಂಭನಾ ಮೆರವಣಿಗೆಯು ಪಡಿಯತ್ತಡ್ಕ, ಮಂಞಂಪಾರೆ ಶ್ರೀ ಜಗದಂಬಾ ಭಜನಾ ಮಂದಿರ, ಅತ್ತನಾಡಿ ಪಯಸ್ವಿನಿ ನಗರ, ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ, ನಡುಬಯಲು, ಕುಂಟಾರು ಶ್ರೀರಾಮ ನಗರ, ವಿವೇಕಾನಂದ ನಗರ, ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಭಜನಾ ಮಂದಿರ ತನಕ ಹೋಗಿ ಕುಂಟಾರು ಶ್ರೀ ಮಹಾವಿಷ್ಣು ಕ್ಷೇತ್ರದ ಸಮೀಪ ಪಯಸ್ವಿನಿ ನದಿಯಲ್ಲಿ ವಿಗ್ರಹ ವಿಸರ್ಜನೆಯೊಂದಿಗೆ ಮುಕ್ತಾಯಗೊಂಡಿತು. ವಾದ್ಯಮೇಳ, ಯಕ್ಷಗಾನ ಸ್ತಬಚಿತ್ರ, ಕುಣಿತಗಳೊಂದಿಗೆ ಮೆರವಣಿಗೆ ಗಮನ ಸೆಳೆಯಿತು.