ಪೆರ್ಲ: ಬಜಕ್ಕೂಡ್ಳು ಅಮೃತಧಾರಾ ಗೋಶಾಲೆಯಲ್ಲಿ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ವಲಯ ವೈದಿಕ ವಿಭಾಗದ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಗಣಪತಿ ಹವನ, ಗೋಪಾಲಕೃಷ್ಣ ಪೂಜೆ, ಗೋಪೂಜೆಯೊಂದಿಗೆ ಗಣೇಶ ಚತುರ್ಥಿ ಸಮಾರಂಭ ಜರಗಿತು. ಮಹಾಮಂಡಲ ಧರ್ಮಕರ್ಮ ಖಂಡದ ಸಂಯೋಜಕ ವೇದಮೂರ್ತಿ ಕೇಶವಪ್ರಸಾದ ಕೂಟೇಲು ನೇತೃತ್ವದಲ್ಲಿ ವಿವಿಧ ವಿಧಿವಿಧಾನಗಳು ನೆರವೇರಿತು.