ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 64ನೇ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.2 ರಿಂದ ಆರಂಭಗೊಂಡಿದ್ದು ಸೆ.6 ರ ತನಕ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಆ ಪ್ರಯುಕ್ತ ಸೆ.2 ರಂದು ಬೆಳಗ್ಗೆ ಶ್ರೀ ಗಣೇಶ ವಿಗ್ರಹವನ್ನು ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮದಿಂದ ವಾದ್ಯಘೋಷಗಳೊಂದಿಗೆ ತಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ಮಧ್ಯಾಹ್ನ ಧ್ವಜಾರೋಹಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇರಳ ಪ್ರಾಂತ ಸಹ ಸಂಘಚಾಲಕ್ ನ್ಯಾಯವಾದಿ ಕೆ.ಕೆ.ಬಲರಾಂ ಕಣ್ಣೂರು ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಉದ್ಘಾಟಿಸಿದರು. ನಂತರ ಪೂಜೆ, ಸಂಜೆ ಭಜನೆ, ಸತ್ಯವಿನಾಯಕ ಪೂಜೆ, ಮಹಾಪೂಜೆ ನಡೆಯಿತು.
ಸೆ.3 ರಂದು ಬೆಳಗ್ಗೆ ಗಣಹೋಮ, ಶ್ರೀ ಮಹಾಗಣಪತ್ಯಥರ್ವಶೀರ್ಷ ಸಹಸ್ರ ಮೋದಕ ಯಾಗ,
ಮಧ್ಯಾಹ್ನ ಪೂಜೆ, ರಾತ್ರಿ ಭಕ್ತಿ ಗಾನಮೇಳ, ಮಹಾಪೂಜೆ ಜರಗಿತು. ಸೆ.4 ರಂದು ಬೆಳಗ್ಗೆ 8 ಕ್ಕೆ ಗಣಹೋಮ, 8.30 ಕ್ಕೆ ಅಷ್ಟೋತ್ತರ ಶತ ನಾಳಿಕೇರ ಯಾಗ, 11.30 ಕ್ಕೆ ಹೋಮ ಪೂರ್ಣಾಹುತಿ, ಮಧ್ಯಾಹ್ನ 1 ಕ್ಕೆ ಪೂಜೆ, 1.15ಕ್ಕೆ ಪ್ರಸಾದ ಭೋಜನ, ಸಂಜೆ 5 ರಿಂದ ಭಜನೆ, ರಾತ್ರಿ 7 ಕ್ಕೆ ತಿರಯಾಟ್ಟಂ, 9 ಕ್ಕೆ ಮಹಾಪೂಜೆ ಜರಗಲಿದೆ.
ಸೆ.5 ರಂದು ಬೆಳಗ್ಗೆ 8 ಕ್ಕೆ ಗಣಹೋಮ, ಮಧ್ಯಾಹ್ನ 1 ಕ್ಕೆ ಪೂಜೆ, ಸಂಜೆ 5 ಕ್ಕೆ ಭಜನೆ, 6.30 ಕ್ಕೆ ಧಾರ್ಮಿಕ ಸಭೆ, ರಾತ್ರಿ 8.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಂಗ ಪೂಜೆ, ಸೆ.6 ರಂದು ಬೆಳಗ್ಗೆ 8 ಕ್ಕೆ ಗಣಹೋಮ, ಮಧ್ಯಾಹ್ನ 1 ಕ್ಕೆ ಪೂಜೆ, ಸಂಜೆ 4.30 ಕ್ಕೆ ಸಮಾರೋಪ ಸಭೆ, 6.30 ಕ್ಕೆ ಧ್ವಜಾವತರಣ, ಮಹಾಪೂಜೆ, ಶ್ರೀ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಹೊರಟು ಬ್ಯಾಂಕ್ ರಸ್ತೆ , ಶಿವಾಜಿನಗರ, ಅಶ್ವಿನಿನಗರ, ನೇತಾಜಿ ವೃತ್ತ, ಮಹಾತ್ಮಾಗಾಂ„ ರಸ್ತೆ, ಶ್ರೀ ರಾಮ ಪೇಟೆಯಾಗಿ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದ ಶ್ರೀ ಲಕ್ಷ್ಮೀ ಸರೋವರದಲ್ಲಿ ಶ್ರೀ ಗಣೇಶ ವಿಗ್ರಹವನ್ನು ವಿಸರ್ಜಿಸಲಾಗುವುದು. ಮೆರವಣಿಗೆ ವೇಳೆ ಭಕ್ತಾದಿಗಳು ಹಣ್ಣುಕಾಯಿ, ಆರತಿಗಳನ್ನು ಅರ್ಪಿಸಬಹುದು.
(ಚಿತ್ರ ಮಾಹಿತಿ : ಪೂಜೆ ಗೊಳ್ಳುತ್ತಿರುವ ಶ್ರೀ ಗಣೇಶ ವಿಗ್ರಹ)