ಬದಿಯಡ್ಕ : ಇಲ್ಲಿನ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಆಶ್ರಯದಲ್ಲಿ ಬಾಯಾರು ಸೂರ್ಯನಾರಾಯಣ ಪದಕಣ್ಣಾಯರ ಮಾರ್ಗದರ್ಶನದಲ್ಲಿ ನವರಾತ್ರಿ ಸಂದರ್ಭದಲ್ಲಿ ಕಾಸರಗೋಡು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ನಡೆಯುವ ರಂಗಸಿರಿ ಯಕ್ಷ ಪಯಣ -2019ರ ಆಮಂತ್ರಣ ಪತ್ರಿಕೆಯನ್ನು ಬದಿಯಡ್ಕದ ನವಜೀವನ ಪ್ರೌಢಶಾಲೆಯ ಶಿಕ್ಷಕಿ, ರಂಗಸಿರಿ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷೆ ಪುಂಡೂರು ಪ್ರಭಾವತಿ ಕೆದಿಲಾಯರು ಶನಿವಾರ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ.ಬೇ ಸಿ ಗೋಪಾಲಕೃಷ್ಣ ಭಟ್, ಕೆ ನರಸಿಂಹ ಭಟ್ ಏತಡ್ಕ, ಬಿ ಗಣೇಶ್ ಪೈ, ಪ್ರಮೀಳಾ ಚುಳ್ಳಿಕ್ಕಾನ, ನಿರ್ಮಲಾ ಶೇಷಪ್ಪ ಖಂಡಿಗೆ, ದಿನೇಶ್ ಬೊಳಂಬು, ಅಭಿಜ್ಞಾ ಬೊಳಂಬು ಮೊದಲಾದವರು ಭಾಗವಹಿಸಿದ್ದರು. ಶಾರದಾ ಎಸ್ ಭಟ್ ಕಾಡಮನೆ ಸ್ವಾಗತಿಸಿ, ವಿರಾಜ್ ಅಡೂರು ವಂದಿಸಿದರು. ಯಕ್ಷಪಯಣದ ಸಂಚಾಲಕ ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು.
ಯಕ್ಷಪಯಣ ಕಾರ್ಯಕ್ರಮವು ಸೆ. 29ರಂದು ಸಂಜೆ 6ರಿಂದ ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ, ಸೆ.30ರಂದು ಸಂಜೆ 6.30ರಿಂದ ಮಡ್ಯಾರು ಪರಾಶಕ್ತಿ ಮಹಾಕಾಲ ಬೈರವೇಶ್ವರ ದೇಗುಲದಲ್ಲಿ, ಅ.1ರಂದು ಸಂಜೆ 5.30ರಿಂದ ಪೆರ್ಲ ಸಮೀಪದ ಶುಲುವಾಲಮೂಲೆ ಶ್ರೀಸದನದಲ್ಲಿ, ಅ.2ರಂದು ರಾತ್ರಿ 7ರಿಂದ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ, ಅ.3ರಂದು ಸಂಜೆ 5ರಿಂದ ಕದ್ರಿ ಮಂಜುನಾಥೇಶ್ವರ ಕ್ಷೇತ್ರದಲ್ಲಿ, ಅ.4ರಂದು ರಾತ್ರಿ 8.30ರಿಂದ ಪಿಲಿಕುಂಜೆ ಜಗದಂಬಾ ದೇವಿ ಕ್ಷೇತ್ರದಲ್ಲಿ, ಅ.5ರಂದು 8.30ರಿಂದ ಮಂಗಳೂರು ರಥಬೀದಿ ಸಾರ್ವಜನಿಕ ಶಾರದಾ ಮಹೋತ್ಸವದಲ್ಲಿ, ಅ.6ರಂದು ಮಧ್ಯಾಹ್ನ 1.30ರಿಂದ ಆವಳಮಠ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಅ.7ರಂದು ಬೆಳಗ್ಗೆ 11ರಿಂದ ವಿದ್ಯಾಗಿರಿ ಶಾಲೆಯ ಶಾರದಾ ಪೂಜೆಯ ಅಂಗವಾಗಿ ಹಾಗೂ ಅದೇ ದಿನ ಸಂಜೆ 7ರಿಂದ ಕೊಲ್ಯ ಮೂಕಾಂಬಿಕಾ ಕ್ಷೇತ್ರದಲ್ಲಿ ಮತ್ತು ಅ.8ರಂದು ರಾತ್ರಿ 9.30ರಿಂದ ಉಪ್ಪಿನಂಗಡಿ ಬಳಿಯ ಕುಂತೂರು ಶಾರದಾ ಭಜನಾ ಮಂದಿರದಲ್ಲಿ ಯಕ್ಷ ಪರ್ಯಟನೆ ನಡೆಯಲಿದೆ.