ಬದಿಯಡ್ಕ: ವಿವಿಧ ಕ್ಷೇತ್ರಗಳಲ್ಲಿ ಖ್ಯಾತರಾಗಿರುವ ಅನೇಕ ಜನರಿಗೆ ವಿದ್ಯೆಯನ್ನು ನೀಡಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ನವನಿರ್ಮಾಪಕ ಹಾಗೂ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಸಹಕಾರಿ ರಂಗಗಳ ಧುರೀಣ ದಿ. ಖಂಡಿಗೆ ಶಾಮ ಭಟ್ಟ ಜನ್ಮಶತಮಾನೋತ್ಸವ ಸಮಾರಂಭವು ಇಂದು (ಭಾನುವಾರ) ನೀರ್ಚಾಲಿನ ಮಹಾಜನ ವಿದ್ಯಾಸಂಸ್ಥೆಯಲ್ಲಿ ಜರಗಲಿರುವುದು.
ಕಾರ್ಯಕ್ರಮದ ಪೂರ್ವಭಾವಿಯಾಗಿ ನಿನ್ನೆ(ಶನಿವಾರ)ಸಂಜೆ ಉಗ್ರಾಣ ಮುಹೂರ್ತ ನೆರವೇರಿತು. ಹಿರಿಯ ಶಿಕ್ಷಕಿ ವಾಣಿ ಪಿ.ಎಸ್.ಜ್ಯೋತಿ ಪ್ರಜ್ವಲನೆಗೈದರು. ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಪ್ರಾರ್ಥನೆ ನೆರವೇರಿಸಿದರು. ಆಹಾರ ಸಮಿತಿ ಸಂಚಾಲಕ ಶ್ರೀಕೃಷ್ಣ ಭಟ್ ಪುದುಕೋಳಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ ಸೂಚಿ:
ಪೂರ್ವಾಹ್ನ 9 ಗಂಟೆಯಿಂದ ಪ್ರಾರಂಭವಾಗಲಿರುವ ವೈದ್ಯಕೀಯ ಶಿಬಿರವನ್ನು ಕಾಸರಗೋಡಿನ ಪ್ರಖ್ಯಾತ ವೈದ್ಯ ಡಾ. ಬಿ.ಎಸ್.ರಾವ್ ಹಾಗೂ ರಕ್ತದಾನ ಶಿಬಿರವನ್ನು ಪ್ರಖ್ಯಾತ ಹಿರಿಯ ದಂತವೈದ್ಯ ಡಾ.ಕೆ.ಗಣಪತಿ ಭಟ್ ಉದ್ಘಾಟಿಸುವರು. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ವಿವಿಧ ವಲಯಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ ಭೋಜನ, ಅಪರಾಹ್ನ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ `ಭೀಮಾಂಜನೇಯ' ಪ್ರದರ್ಶನಗೊಳ್ಳಲಿದೆ.
ಸಂಸ್ಮರಣಾ ಸಮಾರಂಭ:
ಅಪರಾಹ್ನ 4 ಗಂಟೆಗೆ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಆಗಮನ, ಪೂರ್ಣಕುಂಭ ಸ್ವಾಗತ, ಕಟ್ಟಡ ಲೋಕಾರ್ಪಣೆ, ಆಶೀರ್ವಚನ ನಡೆಯಲಿದೆ. ಜನ್ಮಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಕೆ.ಮಹಾಲಿಂಗ ಭಟ್ ಕಾನತ್ತಿಲ ಸಭೆಯ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಐ.ವಿ.ಭಟ್ ಸಂಸ್ಮರಣಾ ಭಾಷಣ ಮಾಡುವರು. ಈ ಸಂದರ್ಭದಲ್ಲಿ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಸಾಹಿತಿ ಎ. ನರಸಿಂಹ ಭಟ್ ಹಾಗೂ ನಿವೃತ್ತ ಸಂಸ್ಕøತ ಅಧ್ಯಾಪಕ ರಾಜಗೋಪಾಲ ಪುಣಿಂಚಿತ್ತಾಯ ಪುಂಡೂರು ಅವರನ್ನು ಸನ್ಮಾನಿಸಲಾಗುವುದು. `ಶತಮಾನ ಪ್ರಭಾ ಚಿತ್ರಸಂಪುಟ'ವನ್ನು ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೈಲಾಸಮೂರ್ತಿ ಕೆ. ಅನಾವರಣಗೊಳಿಸುವರು. ನಿವೃತ್ತ ಕನ್ನಡ ಪಂಡಿತ ಡಾ. ಸದಾಶಿವ ಭಟ್ ಪಳ್ಳು, ನಿಡ್ಪಳ್ಳಿ ಶುಭಾಶಂಸನೆಗೈಯ್ಯುವರು. ಸಂಜೆ 6.30ರಿಂದ ಶಾಸ್ತ್ರೀಯ ಸಂಗೀತಕಚೇರಿ ನೀರ್ಚಾಲು ಆರಾಧನಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಾದ ಕು. ಹೇಮಶ್ರೀ ಕಾಕುಂಜೆ, ಕು. ಶ್ರೀವಾಣಿ ಕಾಕುಂಜೆ, ಕು. ರಮ್ಯಶ್ರೀ ಅಂಬಕಾನ ಇವರಿಂದ ಹಾಡುಗಾರಿಕೆ, ವಿದ್ವಾನ್ ಪ್ರಭಾಕರ ಕುಂಜಾರು, ಅಕ್ಷರ ಬೆದ್ರಡಿ ಕಲ್ಲಕಟ್ಟ ಪಕ್ಕವಾದ್ಯಗಳಲ್ಲಿ ಸಾಥ್ ನೀಡಲಿದ್ದಾರೆ.
ವೈದ್ಯಕೀಯ ಶಿಬಿರಗಳು:
ಮಂಗಳೂರಿನ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‍ನ ನೇತೃತ್ವದಲ್ಲಿ ದಂತ ಚಿಕಿತ್ಸಾ ಶಿಬಿರ,
ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ವತಿಯಿಂದ ಕಣ್ಣಿನ ಪೊರೆ ತಪಾಸಣಾ ಶಿಬಿರ, ನೀರ್ಚಾಲು ನಿವೇದಿತಾ ಸೇವಾ ಮಿಶನ್ ಹಾಗೂ ಮುಗು ವಾಟರ್ ಶೆಡ್ ಸಮಿತಿಯ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.