ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯದ 100 ಮಂದಿಯನ್ನು ಒಳಗೊಂಡ ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಕೇಂದ್ರ ಗೃಹ ವ್ಯವಹಾರಗಳ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.
ನಾರ್ತ್ ಬ್ಲಾಕ್ ನಲ್ಲಿರುವ ಗೃಹ ಸಚಿವರ ಕಛೇರಿಯಲ್ಲಿ ಜಮ್ಮು,ಶ್ರೀನಗರ, ಪುಲ್ವಾಮಾ ಹಾಗೂ ಲಡಾಕ್ ಪ್ರದೇಶಗಳ ನಾಗರೀಕರನ್ನು ಒಳಗೊಂಡ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಕಳೆದ ಆಗಸ್ಟ್ 5 ರಂದು ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಜಮ್ಮು ಕಾಶ್ಮೀರ ಜನರೊಂದಿಗೆ ಕೇಂದ್ರ ಗೃಹ ಸಚಿವರು ನಡೆಸಿದ ಮೊದಲ ಸಭೆ ಇದಾಗಿದೆ.
ಗೃಹ ಸಚಿವರೊಂದಿಗೆ ನಿಯೋಗ ನಡೆಸಿದ ಮಾತುಕತೆಯ ವಿವರಗಳನ್ನು ಗೃಹ ಸಚಿವಾಲಯ ಬಹಿರಂಗಪಡಿಸಿಲ್ಲ. ವಿಶ್ವಾಸ ಮೂಡಿಸುವ ಸರ್ಕಾರದ ಕ್ರಮಗಳ ಭಾಗವಾಗಿ ಈ ಸಭೆ ನಡೆದಿದೆ ಎಂದು ಹೇಳಲಾಗಿದೆ. 370ನೇ ವಿಧಿ ರದ್ದುಪಡಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ಹಾಗೂ ಪ್ರತಿಭಟನೆಗನ್ನು ಹತ್ತಿಕ್ಕಲು ಸರ್ಕಾರ ರಾಜ್ಯದಲ್ಲಿ ಹಲವು ರೀತಿಯ ನಿಬರ್ಂಧಗಳನ್ನು ವಿಧಿಸಿದೆ. ಹಂತ ಹಂತವಾಗಿ ಕೆಲವು ನಿಬರ್ಂಧಗಳನ್ನು ತೆಗೆಯಲಾಗುತ್ತಿದೆ.
ರಾಜ್ಯದಲ್ಲಿ ಶಾಲೆ, ಆಸ್ಪತ್ರೆಗಳು ಹಾಗೂ ಸರ್ಕಾರಿ ಕಚೇರಿಗಳು ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ, ಸ್ಥಿರ ದೂರವಾಣಿ ಸೇವೆಗಳನ್ನು ಪುನರಾಂಭಿಸಲಾಗಿದೆ. ಶ್ರೀನಗರ ಹಾಗೂ ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಜಮ್ಮುಕಾಶ್ಮೀರ ಹಾಗೂ ಲಡಾಕ್ ಎರಡು ಕೇಂದ್ರಾಡಳಿ ಪ್ರದೇಶಗಳಾಗಿ ಆಕ್ಟೋಬರ್ 31 ರಿಂದ ಅಸ್ತಿತ್ವಕ್ಕೆ ಬರಲಿವೆ.