ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾನುಷ್ಠಾನ ಕಾರ್ಯಕ್ರಮಗಳು ಶ್ರೀಮಠದಲ್ಲಿ ಜುಲೈ 25 ರಿಂದ ಆರಂಭಗೊಂಡು ಸೆ. 14ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದು, ಆ.31 ರಂದು ಶನಿವಾರ ಸಂಜೆ ವಿದುಷಿಃ ಉಷಾ ಈಶ್ವರ ಭಟ್ ಕಾಸರಗೋಡು ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಪಕ್ಕವಾದ್ಯಗಳಲ್ಲಿ ವಿದ್ವಾನ್ ವೇಣುಗೋಪಾಲ ಶಾನುಭೋಗ್(ವಯಲಿನ್), ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು(ಮೃದಂಗ), ವಿದ್ವಾನ್ ಈಶ್ವರ ಭಟ್ (ಘಟಂ)ನಲ್ಲಿ ಸಹಕರಿಸಿದರು.
ಬುಧವಾರ ಸಂಜೆ 7 ರಿಂದ ಯಜ್ಞೇಶ್ ಆಚಾರ್ಯ ಸುಬ್ರಹ್ಮಣ್ಯ ಮತ್ತು ಬಳಗದವರಿಂದ ದಾಸವಾಣಿ ಕಾರ್ಯಕ್ರಮ ಪ್ರಸ್ತುತಗೊಂಡಿತು. ಇಂದು(ಗುರುವಾರ) ಸಂಜೆ 7 ರಿಂದ ವಿದ್ವಾನ್ ಕಲ್ಮಾಡಿ ಸದಾಧಿವ ಆಚಾರ್ಯ ಕಾಸರಗೋಡು ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಶುಕ್ರವಾರ ಸಂಜೆ ಮಂಗಲ್ಪಾಡಿಯ ಯಕ್ಷಕೂಟ ಮಹಿಳಾ ಸಂಘದವರಿಂದ ಯಕ್ಷಗಾನ ತಾಳಮದ್ದಳೆ ಶಾಪಾನುಗ್ರಹ ನಡೆಯಲಿದೆ. ಶನಿವಾರ ಸಂಜೆ ಸುರತ್ಕಲ್ಲಿನ ನಾಟ್ಯಾಂಜಲಿ ಕಲಾ ಅಕಾಡೆಮಿ ಪ್ರಸ್ತುತಪಡಿಸುವ ವಿದ್ವಾನ್ ಕೆ.ಚಂದ್ರಶೇಖರ ನಾವಡ ಅವರ ನಿರ್ದೇಶನದಲ್ಲಿ ನಾಟ್ಯ ವೈಭವ ಹಾಗೂ ಭಸ್ಮಾಸುರ ಮೋಹಿನಿ ನೃತ್ಯ ರೂಪಕ ನಡೆಯಲಿದೆ. ಭಾನುವಾರ ಸಂಜೆ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳಿಂದ ಭಕ್ತಿಸಂಗೀತ ಗಾಯನ ನಡೆಯಲಿದ್ದು, ಹಿಮ್ಮೇಳದಲ್ಲಿ ಟಿ.ಜಿ.ಗೋಪಾಲಕೃಷ್ಣನ್(ವಯಲಿನ್), ಎಂ.ಕೆ.ಪ್ರಾಣೇಶ್(ಕೊಳಲು), ಅನೂರು ಅನಂತಕೃಷ್ಣ ಶರ್ಮ(ಮೃದಂಗ), ಟ್ರಿಚ್ಚಿ ಕೆ.ಆರ್.ಕುಮಾರ್ (ಘಟಂ), ದೇವರಾಜ್ ಆಚಾರ್(ಮ್ಯಾಂಡಲಿನ್) ನಲ್ಲಿ ಸಹಕರಿಸುವರು. ಸೋಮವಾರ ಸಂಜೆ ಗೀತಾ ವಿಹಾರ ಕಾಸರಗೋಡು ತಂಡದವರಿಂದ ಭಜನ್ ಸಂಧ್ಯಾ ನಡೆಯಲಿದೆ.
ಚಾತುರ್ಮಾಸ್ಯದ ಅಂಗವಾಗಿ ಪ್ರತಿನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಪೂಜಾ ಸೇವೆಗಳು, ವೈದಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.