ಸಮರಸ ಚಿತ್ರ ಸುದ್ದಿ: ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನವೆಂಬರ್ 3 ರಿಂದ 10 ರವರೆಗೆ ನಡೆಯಲಿರುವ 7 ನೇವರ್ಷದ ಶ್ರೀ ಮದ್ಭಾಗವತ ಸಪ್ತಾಹ ಯಜ್ಞದ ಕರಪತ್ರವನ್ನು ಶ್ರೀಕ್ಷೇತ್ರ ಆವರಣದಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.