ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗ ಸಂಸ್ಥೆಯಾದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ತಿಂಗಳ ಸಭೆಯು ಅ.12ರಂದು ಬೆಳಿಗ್ಗೆ 10ರಿಂದ ಅಡೂರು ತಲ್ಪಚ್ಚೇರಿ ಸುಂದರ ಕಲ್ಲೂರಾಯ ಅವರ ಮನೆಯಲ್ಲಿ ಜರಗಲಿದೆ.
ವಲಯ ಸಮಿತಿ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಶ್ರೀಪತಿ ಎಂ. ಅವರು `ವಾಣಿಜ್ಯ ಕೃಷಿ ಬೆಳೆಗಳಿಗೆ ಪೆÇೀಷಕಾಂಶ ಪೂರೈಕೆಯ ಮಾನದಂಡಗಳು' ಎಂಬ ವಿಚಾರದಲ್ಲಿ ಮಾಹಿತಿ ನೀಡಲಿದ್ದಾರೆ. ಜೊತೆಗೆ ವಿಚಾರದ ಕುರಿತಾಗಿ ಸಂವಾದ ನಡೆಯಲಿದೆ.
ಕೇರಳ ಮಾಧ್ವ ಬ್ರಾಹ್ಮಣ ಸಭಾದ ಕೇರಳ ರಾಜ್ಯ ಮಟ್ಟದ 2019ರ ಸಾಲಿನ ವಿವಿಧ ವಿದ್ಯಾರ್ಥಿ ವೇತನದ ಪ್ರತಿಭಾನ್ವಿತ ಫಲಾನುಭವಿಗಳು ಅರ್ಜಿ ನಮೂನೆಯನ್ನು ಸೂಕ್ತ ದಾಖಲೆಗಳೊಂದಿಗೆ ಸಭೆಯಲ್ಲಿ ಸಲ್ಲಿಸಬೇಕೆಂದು ಮನವಿ ಮಾಡಲಾಗಿದೆ. ಸಭೆಯಲ್ಲಿ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಂದು ಪ್ರಕಟಣೆ ತಿಳಿಸಿದೆ.