ಕಾಸರಗೋಡು: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಆನಂದಾಶ್ರಮ ಆವರಣದಲ್ಲಿ 150 ಮರವಾಗಬಲ್ಲ ಸಸಿಗಳನ್ನು ನೆಡುವ ಕಾಯಕಕ್ಕೆ ಮೇಲಂಕೋಡು ಎ.ಸಿ.ಕಣ್ಣನ್ ನಾಯರ್ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹರಿತ ಸೇನೆ ನೇತೃತ್ವ ವಹಿಸಿದೆ.
ಆಶ್ರಮ ಆವರಣದ 20 ಸೆಂಟ್ಸ್ ಜಾಗದಲ್ಲಿ ಸ್ಥಳೀಯ ಕೃಷಿ ವಿಜ್ಞಾನಿ, ಪರಿಸರ ಪ್ರೇಮಿ ದಿವಾಕರನ್ ನೀಲೇಶ್ವರ ಅವರ 5ನೇ ಗೃಹ ವನಂ ಯೋಜನೆಯಲ್ಲಿ ಅಳವಡಿಸಿ ಈ ಕಾಯಕ ನಡೆಸಲಾಯಿತು. ಸ್ವಾಮಿ ಮುಕ್ತನಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಮುಖ್ಯಶಿಕ್ಷಕ ಡಾ.ಕೊಡಕ್ಕಾಡ್ ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಎನ್.ಪ್ರಕಾಶನ್, ದಿವಾಕರನ್ ನೀಲೇಶ್ವರ, ಸ್ವಾಮಿನಿ ಚಂದ್ರಾನಂದ, ಪಿ.ಷಿಜು, ದತ್ತ ಪ್ರಸಾದ್, ಶಿಕ್ಷಕರಾದ ಪಿ.ಪಿ.ಮೋಹನನ್, ಕೆ.ಕೆ.ಶ್ರೀಜಾ ಉಪಸ್ಥಿತರಿದ್ದರು. ಮೃತ ಸಂಜೀವಿನಿ ಸಹಿತ 150 ಫಲ ನೀಡುವ ಸಸಿಗಳನ್ನು ಈ ವೇಳೆ ನೆಡಲಾಗಿದೆ.