ಬದಿಯಡ್ಕ: ಕನ್ನಡದ ಉಳಿವಿನ ಹೋರಾಟಕ್ಕಾಗಿ ಸ್ಥಾಪನೆಗೊಂಡ ಬದಿಯಡ್ಕ ಪ್ರಾದೇಶಿಕ ಸಮಿತಿಯ ಸಭೆಯು ಇತ್ತೀಚೆಗೆ ಬದಿಯಡ್ಕದಲ್ಲಿ ನಡೆಯಿತು. ನವಂಬರ್ 1ರಂದು ಬೆಳಿಗ್ಗೆ 10 ಗಂಟೆಯಿಂದ ಕಾಸರಗೋಡು ಕರಂದಕ್ಕಾಡಿನಲ್ಲಿ ಜರಗಲಿರುವ ಕನ್ನಡಿಗರ ಹಕ್ಕು ಸಂರಕ್ಷಣಾ ದಿನದಲ್ಲಿ ಸಮಸ್ತ ಕನ್ನಡಿಗರು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ. ಪ್ರಾದೇಶಿಕ ಸಮಿತಿಯ ಮುಖಂಡರಾದ ಕೋರಿಕ್ಕಾರು ಕೃಷ್ಣ ಭಟ್ ಸಭೆಯಲ್ಲಿ ಸಲಹೆ ಸೂಚನೆಯನ್ನು ನೀಡಿದರು. ಪೆರ್ಮುಖ ವೆಂಕಟ್ರಮಣ ಭಟ್, ಶ್ಯಾಮ ಆಳ್ವ ಕಡಾರು, ನವೀನ್ ಚಂದ್ರ ಮಾನ್ಯ, ಗೋವಿಂದ ಭಟ್ ಬೇಂದ್ರೋಡು, ಬೇ.ಸೀ.ಗೋಪಾಲಕೃಷ್ಣ, ರವಿಕಾಂತ ಕೇಸರಿ ಕಡಾರು ಮೊದಲಾದವರು ಪಾಲ್ಗೊಂಡಿದ್ದರು.