ಕಾಸರಗೋಡು: ಶಿಶು ದಿನಾಚರಣೆ ಅಂಗವಾಗಿ ವರ್ಣೋತ್ಸವ ಕಾರ್ಯಕ್ರಮ ನ.1ರಂದು ಬೆಳಗ್ಗೆ 10 ಗಂಟೆಗೆ ಉದುಮ ಸಾಗರ್ ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿ ಸಂಸತ್ತು ಜರುಗಿದ್ದು, ರಾಷ್ಟ್ರಾ ಧ್ಯಕ್ಷ , ಪ್ರಧಾನಿ, ಸ್ಪೀಕರ್ ಮೊದಲಾದವರ ಆಯ್ಕೆಯನ್ನು ಮಕ್ಕಳು ನಡೆಸಲಿದ್ದಾರೆ.
ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭಾಷಣ, ಕಾವ್ಯಾಲಾಪನೆ, ಪ್ರಬಂಧ ರಸಪ್ರಶ್ನೆ ಇತ್ಯಾದಿ ಸ್ಪರ್ಧೆಗಳು ಜರುಗಲಿವೆ. ಶಾಲೆಯಿಂದ ದೃಡೀಕರಣ ಪತ್ರ ಸಹಿತ ವಿದ್ಯಾರ್ಥಿಗಳು ಕ್ಲಪ್ತ ಸಮಯಕ್ಕೆ ಹಾಜರಾಗಬೇಕು. ದೂರವಾಣಿ ಸಂಖ್ಯೆ 9447649957, 9447652335 ಗಳಿಗೆ ಕರೆಮಾಡಿ ಹೆಸರು ನೋಂದಣಿ ನಡೆಸಬೇಕು.
ಸಂಘಟನಾ ಸಮಿತಿ ಪದಾಧಿಕಾರಿಗಳು: ಅಧ್ಯಕ್ಷೆ-ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ, ಉಪಾಧ್ಯಕ್ಷರು-ಹೆಚ್ಚುವರಿ ದಂಡನಾಧಿಕಾರಿ ಕೆ.ಅಜೇಶ್, ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಎ.ಡಿ.ಸಿ.ಜನರಲ್ ಬೆವಿನ್ ಜಾನ್, ಡಿ.ಸಿ.ಪಿ.ಒ.ಬಿಂದು, ಸಂಚಾಲಕ-ಮಧು ಮುದಿಯಕ್ಕಾಲ್, ಜತೆ ಸಂಚಾಲಕರು-ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ನಗರಸಭೆ ಸದಸ್ಯ ದಿನೇಶನ್. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಮಧು ಮುದಿಯಕ್ಕಾಲ್, ಹೆಚ್ಚುವರಿ ದಂಡನಾಧಿಕಾರಿ ಕೆ.ಅಜೇಶ್, ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ, ಎ.ಡಿ.ಸಿ. ಜನರಲ್ ಬೆವಿನ್ ಜಾನ್, ಶಿಶು ಕಲ್ಯಾಣ ಸಮಿತಿ ರಾಜ್ಯ ಕಾರ್ಯಕಾರಿ ಸದಸ್ಯ ಒ.ಎಂ.ಬಾಲಕೃಷ್ಣನ್, ನಗರಸಭೆ ಸದಸ್ಯ ದಿನೇಶನ್,ಬಿ.ವೈಶಾಖ್, ಅಜಯನ್ ಪನೆಯಾಲ್ ಮೊದಲಾದವರು ಉಪಸ್ಥಿತರಿದ್ದರು.