ಕಾಸರಗೋಡು: ಕೇರಳ ರಾಜ್ಯೋತ್ಸವ ಅಂಗವಾಗಿ ಆಡಳಿತೆ ಭಾಷಾ ಸಪ್ತಾಹ ಜಿಲ್ಲೆಯಲ್ಲಿ ನ.1ರಿಂದ 7 ವರೆಗೆವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಜಿಲ್ಲಾ-ತಾಲೂಕು-ಪಂಚಾಯತ್ ಮಟ್ಟದಲ್ಲಿ ಆಡಳಿತೆ-ಮಾತೃಭಾಷೆ ಚರ್ಚೆ, ವಿಚಾರಸಂಕಿರಣ, ಸ್ಪರ್ಧೆ ಇತ್ಯಾದಿಗಳು ನಡೆಯಲಿವೆ. ಕಾರ್ಯಕ್ರಮದ ಜಿಲ್ಲಾ ಮಟ್ಟದ ಉದ್ಘಾಟನೆ ನವೆಂಬರ್ 2ರಂದು ಮಧ್ಯಾಹ್ನ 2.30ಕ್ಕೆ ಕಾ?ಂಗಾಡ್ ನಲ್ಲಿನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು. ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಅಧ್ಯಕ್ಷ, ಜಿಲ್ಲಾ ವಾರ್ತಾಧಿಕಾರಿ ಸಂಚಾಲಕ,ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಕಾರಿ ಸದಸ್ಯರಾಗಿರುವ ಸಮಿತಿ ರಚಿಸಲಾಗಿದೆ. ಈ ಸಂಬಂಧಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಕೆ.ಅಜೇಶ್, ಜಿಲ್ಲಾ ವಾರ್ತಾಧಿಕಾರಿಮಧುಸೂದನನ್ ಎಂ., ಹುಸೂರ್ ಶಿರಸ್ತೇದಾರ್ ಕೆನಾರಾಯಣನ್, ಹಣಕಾಸು ಅಧಿಕಾರಿ ಕೆ.ಸತೀಶನ್, ಜಿಲ್ಲಾ ಮಟ್ಟದ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.
200 ಮಂದಿಯ ತಿರುವಾದಿಕ್ಕಳಿ!:
ಕೇರಳ ರಾಜ್ಯೋತ್ಸವ ಆಚರಣೆ ಅಂಗವಾಗಿ ನ.1ರಂದು ಬೆಳಗ್ಗೆ 9.30ಕ್ಕೆ ಸಿವಿಲ್ ಸ್ಟೇಷನ್ ಆವರಣದಲ್ಲಿ 200 ಮಂದಿ ಕಲಾವಿದೆಯರು ಭಾಗವಹಿಸುವ ತಿರುವಾದಿಕಳಿ ನಡೆಯಲಿದೆ. ಜಿಲ್ಲಾ ವಾರ್ತಾ ಇಲಾಖೆ, ಲಯನ್ಸ್ ಕ್ಲಬ್, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಂಡಳಿ ಜಂಟಿ ವತಿಯಿಂದ ಜರುಗುವ ಸಮಾರಂಭದಲ್ಲಿ ಮಲೆಯಾಳ ಮಾಮಾಂಗಂ ಸಂಘಟನೆ ಪ್ರಸ್ತುತಿನಡೆಸಲಿದೆ. ನಂತರ ಬೆಳಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಿರು ಸಭಾಂಗಣದಲ್ಲಿ ಸಾಹಿತಿ ಜಿನೇಶ್ ಕುಮಾರ್ ಎರಮಂ ಪ್ರಧಾನ ಭಾಷಣ ಮಾಡುವರು.