ಬದಿಯಡ್ಕ : ಕುಂಬಳೆ ಯುವ ಬಂಟರ ಸಂಘ, ಮಹಿಳಾ ಬಂಟರ ಸಂಘ ಮತ್ತು ಫಿರ್ಕಾ ಬಂಟರ ಸಂಘದ ಆಶ್ರಯದಲ್ಲಿ ನವೆಂಬರ್ 3ರಂದು ಅಂಬಿಲಡ್ಕ ದೈವಸ್ಥಾನದ ವಠಾರದಲ್ಲಿ ತುಳುನಾಡ ಬಲಿಯೇಂದ್ರ ಪರ್ಬ ಜರಗಲಿದೆ. ಇದರ ಪೂರ್ವಭಾವಿ ಸಭೆ ಕುಂಬಳೆ ಫಿರ್ಕಾ ಬಂಟರ ಸಂಘದ ಬದಿಯಡ್ಕ ಕಚೇರಿಯಲ್ಲಿ ಜರಗಿತು.
ಕುಂಬಳೆ ಫಿರ್ಕಾ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು ವಿವಿಧ ಪಂಚಾಯತಿ ಘಟಕದ ಅಧ್ಯಕ್ಷರಾದ ನಾರಾಯಣ ಆಳ್ವ ಎಣ್ಮಕಜೆ, ಮನಮೋಹನ್ ರೈ ಪಿಂಡಗ, ಚಿದಾನಂದ ಆಳ್ವ, ಕೃಷ್ಣ ಪ್ರಸಾದ್, ಗೋಪಾಲಕೃಷ್ಣ ರೈ ಕುತ್ತಿಕಾರು, ಲೋಕನಾಥ ಶೆಟ್ಟಿ, ನಿರಂಜನ್ ರೈ ಪೆರಡಾಲ, ಹರೀಶ್ ಆಳ್ವ ಉಜಾರ್, ಹರ್ಷಕುಮಾರ್ ರೈ ಬೆಳಿಂಜ, ಸಂತೋಷ್ ರೈ ಬಜದಗುತ್ತು, ಯುವ ಬಂಟರ ಸಂಘದ ಕಾರ್ಯದರ್ಶಿ ವೃಥ್ವಿರಾಜ್ ಶೆಟ್ಟಿ, ಶ್ಯಾಮ ಆಳ್ವ ಕಡಾರ್, ಸತಿಶ್ಚಂದ್ರ ಶೆಟ್ಟಿ ಮೊದಲಾವರು ಮಾತನಾಡಿದರು. ಕುಂಬಳೆ ಫಿರ್ಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದರ ಭಾಗವಾಗಿ ಅಂಬಿಲಡ್ಕದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಹಮ್ಮಿಕೊಳ್ಳಲಾಗುವುದು. ಇದರ ಪ್ರಯುಕ್ತ ಜಿಲ್ಲಾ ಮಟ್ಟದ ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಕುಂಬಳೆ ಶಾಲಾ ಮೈದಾನದಲ್ಲಿ ಅ. 27ರಂದು ನಡೆಯಲಿರುವುದು. ಅಶೋಕ್ ರೈ ಕೊರೆಕ್ಕಾನ ಸ್ವಾಗತಿಸಿ, ಹರಿಪ್ರಸಾದ್ ರೈ ಮಾಯಿಲೆಂಗಿ ವಂದಿಸಿದರು.