ಕಾಸರಗೋಡು: ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ನೇತೃತ್ವದಲ್ಲಿ ನ.3 ರಂದು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಕಾಸರಗೋಡು ಕನ್ನಡ ರಾಜ್ಯೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಧ್ಯಾಹ್ನ 2.30 ರಿಂದ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸುವರು. ರಂಗನಟ, ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‍ಬೈಲ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಭಾ.ಜ.ಪ. ಮಂಗಳೂರು ದಕ್ಷಿಣ ಕ್ಷೇತ್ರ ಸ್ಲಂ ಮೋರ್ಚಾ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ನ್ಯಾಯವಾದಿ ಕೆ.ಶ್ರೀಕಾಂತ್ ಅವರಿಗೆ ಕಾಸರಗೋಡು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಹಿತಿ ಅಕ್ಷತಾರಾಜ್ ಪೆರ್ಲ ರಾಜ್ಯೋತ್ಸವ ಉಪನ್ಯಾಸ ನೀಡುವರು.
ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ, ಉದ್ಯಮಿ ರಾಮ್ ಪ್ರಸಾದ್ ಶುಭಹಾರೈಸುವರು. ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ, ನಿರ್ದೇಶಕ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಎಂ, ಸೌಮ್ಯ ಪ್ರಸಾದ್, ಲತಾ ಪ್ರಕಾಶ್, ಕಾವ್ಯ ಕುಶಲ ಮೊದಲಾದವರು ಉಪಸ್ಥಿತರಿರುವರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕನ್ನಡ ನಾಡಗೀತೆ, ನೃತ್ಯ ವೈವಿಧ್ಯ, ಗಾಯನ ನಡೆಯಲಿದೆ. ಕಲಾವಿದರಾದ ದಿವಾಕರ ಅಶೋಕ್‍ನಗರ, ಸ್ಮಿತಾ ಉದಯಪ್ರಕಾಶ್, ಯಜ್ಞೇಶ್ ಆಚಾರ್ಯ ಬಾಯಾರು, ಉದಯ ಕಾರ್ಲೆ, ಸ್ವರ್ಣಲತಾ ಬಾಯಾರು, ಸುಜಿತ್ ಬೇಕೂರು ಕಾರ್ಯಕ್ರಮ ನೀಡಲಿದ್ದಾರೆ. ಸತ್ಯನಾರಾಯಣ ಐಲ, ಜಗದೀಶ ಉಪ್ಪಳ ಹಿಮ್ಮೇಳದಲ್ಲಿ ಸಹಕರಿಸುವರು.