ಮುಂಬೈ: ಎಲ್ಲ ಭಾರತೀಯರ ಸಂಪೂರ್ಣ ಡಿಜಿಟಲ್ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ, ಜಿಯೋ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ. ಇಂದು, ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿದೆ.
ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ 699 ರೂ. ವಿಶೇಷ ಬೆಲೆಯಲ್ಲಿ ದೊರಕಲಿದೆ. 1,500 ರೂ. ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು ರೂ. 800ರ ಸ್ಪಷ್ಟ ಉಳಿತಾಯವಾಗಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕು ಎನ್ನುವಂತಹ ಯಾವ ವಿಶೇಷ ನಿಬಂಧನೆಯೂ ಇರುವುದಿಲ್ಲ.
ಈ ಬೆಲೆ ಸದ್ಯ ಮಾರುಕಟ್ಟೆಯಲ್ಲಿರುವ ಅನೇಕ 2ಜಿ ಫೀಚರ್ ಫೋನುಗಳ ಬೆಲೆಗಿಂತ ಬಹಳ ಕಡಿಮೆಯಿದೆ. ಹೀಗಾಗಿ, 4ಜಿ ಸೇವೆಗಳಿಗೆ ಉನ್ನತೀಕರಿಸಿಕೊಳ್ಳಲು ಫೀಚರ್ ಫೋನ್ ಬಳಕೆದಾರರಿಗಿದ್ದ ಕೊನೆಯ ಅಡಚಣೆಯೂ ಇದೀಗ ನಿವಾರಣೆಯಾದಂತಾಗಿದೆ. ಜಿಯೋಫೋನ್ ಕೊಳ್ಳಲು ಹಾಗೂ 2ಜಿಯಿಂದ 4ಜಿ ಡೇಟಾ ಜಗತ್ತಿಗೆ ಸ್ಥಳಾಂತರಗೊಳ್ಳಲು ಜಿಯೋಫೋನ್ ಗ್ರಾಹಕರು ವ್ಯಯಿಸುವ ರೂ. 700 ಮೊತ್ತಕ್ಕೆ ಪ್ರತಿಯಾಗಿ, ಜಿಯೋ ತನ್ನ ಕಡೆಯಿಂದಲೂ ಒಂದು ಹೂಡಿಕೆಯ ವಾಗ್ದಾನ ಮಾಡುತ್ತಿದೆ. ಇದು ಜಿಯೋದ ಹೂಡಿಕೆ ಮತ್ತು ಭಾರತೀಯ ಸಮಾಜದ ಅತ್ಯಂತ ಅಗತ್ಯವುಳ್ಳ ವರ್ಗಗಳನ್ನು ಅಂತರ್ಜಾಲದ ಅರ್ಥವ್ಯವಸ್ಥೆಗೆ ಕರೆತರುವ ನಿಟ್ಟಿನ ಬದ್ಧತೆಯಾಗಿದೆ.
ದೀಪಾವಳಿ 2019 ಕೊಡುಗೆಯ ಮೂಲಕ ಜಿಯೋಗೆ ಸೇರುವ ಜಿಯೋಫೋನ್ ಗ್ರಾಹಕರಿಗೆ ಜಿಯೋ ವತಿಯಿಂದ ರೂ. 700 ಮೌಲ್ಯದ ಡೇಟಾ ಲಾಭ ದೊರಕಲಿದೆ. ಗ್ರಾಹಕರು ಮಾಡುವ ಮೊದಲ 7 ರೀಚಾರ್ಜ್‍ಗಳಿಗೆ, ತಲಾ ರೂ. 99 ಮೌಲ್ಯದ ಡೇಟಾವನ್ನು ಜಿಯೋ ಹೆಚ್ಚುವರಿಯಾಗಿ ನೀಡಲಿದೆ.
ರೂ. 700 ಮೌಲ್ಯದ ಈ ಹೆಚ್ಚುವರಿ ಡೇಟಾದಿಂದ ಮನರಂಜನೆ, ಪಾವತಿಗಳು, ಇ-ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್, ಕೃತಕ ಬುದ್ಧಿಮತ್ತೆಯ (ಎಐ) ಆಪ್‍ಗಳು ಮತ್ತಿತರ ಅನೇಕ ಸವಲತ್ತುಗಳ ಹಿಂದೆಂದೂ ನೋಡಿರದ ಜಗತ್ತನ್ನು ಪ್ರವೇಶಿಸುವುದು ಜಿಯೋಫೋನ್ ಗ್ರಾಹಕರಿಗೆ ಸಾಧ್ಯವಾಗಲಿದೆ.
ಜಿಯೋಫೋನ್ ಮೇಲೆ ರೂ. 800ರ ಉಳಿತಾಯ ಹಾಗೂ ರೂ. 700 ಮೌಲ್ಯದ ಡೇಟಾ ಸೇರಿ, ಪ್ರತಿ ಜಿಯೋಫೋನ್ ಮೇಲೆ ರೂ.1,500ರಷ್ಟು ಲಾಭ ದೊರಕುತ್ತಿದೆ. ಅಭಿವೃದ್ಧಿಹೊಂದುತ್ತಿರುವ ಡಿಜಿಟಲ್ ಇಂಡಿಯಾಗಾಗಿ ರೂ. 1,500ರ ಈ ಲಾಭ ಜಿಯೋದ ದೀಪಾವಳಿ ಉಡುಗೊರೆಯಾಗಿದೆ. ಹಬ್ಬದ ತಿಂಗಳಿನಲ್ಲಿ ಲಭ್ಯವಿರುವ ಈ ಒಂದು ಬಾರಿಯ ಕೊಡುಗೆಯನ್ನು ಬಳಸಿಕೊಳ್ಳಲು ಹಾಗೂ ಜಿಯೋಫೋನ್ ವೇದಿಕೆಗೆ ಉನ್ನತೀಕರಿಸಿಕೊಳ್ಳಲು 2ಜಿ ಸೇವೆಗಳನ್ನು ಬಳಸುತ್ತಿರುವ ಎಲ್ಲ ಭಾರತೀಯರನ್ನೂ ಜಿಯೋ ಆಹ್ವಾನಿಸುತ್ತಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಮುಖೇಶ್ ಡಿ. ಅಂಬಾನಿ, "ಕೈಗೆಟುಕುವ ಬೆಲೆಯ ಅಂತರಜಾಲದಿಂದ ಹಾಗೂ ಡಿಜಿಟಲ್ ಕ್ರಾಂತಿಯ ಫಲಗಳಿಂದ ಯಾವ ಭಾರತೀಯರೂ ವಂಚಿತರಾಗದಂತೆ ಜಿಯೋ ಖಾತರಿಪಡಿಸಲಿದೆ.
'ಜಿಯೋಫೋನ್ ದೀಪಾವಳಿ ಉಡುಗೊರೆ'ಯನ್ನು ನೀಡುವ ಮೂಲಕ, ಆರ್ಥಿಕ ಪಿರಮಿಡ್‍ನ ಕೆಳಭಾಗದಲ್ಲಿರುವ ಪ್ರತಿಯೊಬ್ಬ ಹೊಸ ವ್ಯಕ್ತಿಯನ್ನೂ ಅಂತರ್ಜಾಲದ ಅರ್ಥವ್ಯವಸ್ಥೆಗೆ ಕರೆತರುವ ನಿಟ್ಟಿನಲ್ಲಿ ನಾವು ರೂ.1,500 ಮೊತ್ತದ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಆಂದೋಲನದ ಯಶಸ್ಸಿನ ಕುರಿತು ನಮಗಿರುವ ಬದ್ಧತೆಯನ್ನೂ ಇದು ತೋರಿಸುತ್ತದೆ." ಎಂದು ಹೇಳಿದ್ದಾರೆ.