ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ ವತಿಯಿಂದ 12ನೇ ವರ್ಷದ ಶಾರದೋತ್ಸವವು ಅ.7 ಹಾಗೂ ಅ.8ರಂದು ಬದಿಯಡ್ಕ ಶ್ರೀ ಗುರುಸದನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ದಿ. ಆರ್.ಚಕ್ರೇಶ್ವರ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದೆ.
ಅ.7ರಂದು ಬೆಳಿಗ್ಗೆ 6.30ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ, ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ಅವರಿಂದ ಬೆಳಗಿನ ಪೂಜೆ, ಪ್ರಾರ್ಥನೆ, ಮಹಾಗಣಪತಿ ಹವನ ಜರಗಲಿದೆ. 8 ಗಂಟೆಯಿಂದ ಶ್ರೀಮಹಾಗಣಪತಿ ಭಜನಾ ಸಂಘ ಅಂಬಟ್ಟೆಮೂಲೆ ತರವಾಡು, ಪಾಡಿ ಇವರಿಂದ ಭಜನೆ, 10 ಕ್ಕೆ ನಿವೃತ್ತ ಟ್ರಾಫಿಕ್ ಎಸ್.ಐ. ನಾಗೇಶ್ ಅವರಿಂದ ಧ್ವಜಾರೋಹಣ, 10.15ಕ್ಕೆ ಆಯುಧ ಪೂಜೆ, 10.30ರಿಂದ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಶಾರದೋತ್ಸವ ಸಮಿತಿಯ ರಕ್ಷಾಧಿಕಾರಿ ಸುಂದರ ನಾಯ್ಕ ಕನಕಪ್ಪಾಡಿ ಸುಬ್ರಹ್ಮಣ್ಯ ಕನಕಪ್ಪಾಡಿ ನೇತೃತ್ವ ವಹಿಸುವರು. ಶಾರದೋತ್ಸವ ಸಮಿತಿಯ ಅಧ್ಯಕ್ಷ ಈಶ್ವರ ಮಾಸ್ತರ್ ಪೆರಡಾಲ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಆಮೆಕ್ಕಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವೈದ್ಯಾಧಿಕಾರಿ ಡಾ. ಕೆ.ನಾರಾಯಣ ನಾಯ್ಕ ಮಾತನಾಡುವರು. ಸಂಪೂರ್ಣ ಸಾವಯವ ಕೃಷಿಯನ್ನು ನಡೆಸುತ್ತಿರುವ ಕೃಷಿಕರಾದ ನಾರಾಯಣ ನಾಯ್ಕ ಪಾಡ್ಲಡ್ಕ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಯುವ ಯಕ್ಷಗಾನ ಭಾಗವತ ಜಯರಾಮ ನಾಯ್ಕ ಆಡೂರು, ರ್ಯಾಂಕ್ ವಿಜೇತೆ ಶಿಶಿರ ಎಸ್.ವಿ., ಹೈಜಂಪ್‍ನಲ್ಲಿ ರಾಜ್ಯಮಟ್ಟದಲ್ಲಿ ಭಾಗಹಿಸಿದ ಲತಾಶ್ರೀ ಚಕ್ರೇಶ್ವರ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿರುವುದು. ಕೇರಳ ಮರಾಟಿ ಎಂಪ್ಲೋಯೀಸ್ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ವೈ., ಪೆರ್ಲ ಶ್ರೀ ಶಾರದಾ ಮರಾಟಿ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀ ಟೀಚರ್, ಮಂಗಳೂರು ಕಾರ್ಪೋರೇಶನ್ ಬ್ಯಾಂಕ್‍ನ ಸಹ ಪ್ರಬಂಧಕ ದೀಪ್ತಿ ಪಿ. ಶುಭಾಶಂಸನೆಗೈಯ್ಯುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. ಅನ್ನಪ್ರಸಾದ. 2ರಿಂದ ಕಲಾಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದು. 3.30ರಿಂದ ಜಯರಾಮ ಪಾಟಾಳಿ ಪಡುಮಲೆ ನಿರ್ದೇಶನದಲ್ಲಿ ಬದಿಯಡ್ಕ ಶಾರದಾಂಬ ಯಕ್ಷಗಾನ ಕಲಾಸಂಘದ ವತಿಯಿಂದ `ಬಪ್ಪನಾಡು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಬಯಲಾಟ ನಡೆಯಲಿರುವುದು. ರಾತ್ರಿ 8.30 ಮಹಾಪೂಜೆ, ಭೋಜನ ನಡೆಯಲಿದೆ
ಅ.8ರಂದು ಬೆಳಿಗ್ಗೆ 7 ಕ್ಕೆ ಉಷಃಪೂಜೆ, 8ರಿಂದ ಭಜನೆ, 9.30ಕ್ಕೆ ವಿದ್ಯಾರಂಭ, 11 ರಿಂದ ಸಮಾರೋಪ ಸಮಾರಂಭ ನಡೆಯಲಿರುವುದು. ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷೆ ಕಮಲ ಪೆರಡಾಲ ಅಧ್ಯಕ್ಷತೆ ವಹಿಸಲಿರುವರು. ಬೆಂಗಳೂರು ಕರ್ನಾಟಕ ಮರಾಟಿ ಸಂಘದ ಉಪಾಧ್ಯಕ್ಷ ದುರ್ಗಾಪ್ರಸಾದ್ ಮಜಕ್ಕಾರ್ ಮುಖ್ಯಅತಿಥಿಯಾಗಿ ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಅಪಘಾತ ರಹಿತ ಚಾಲಕ ಪುರಸ್ಕøತರಾದ ಶೀನ ನಾಯ್ಕ ಕಡಬ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿರುವುದು. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಿಕೆ ಡಾ.ಸಂಧ್ಯಾ
ಕುಮಾರಿ ಪಿ. ಇವರಿಗೆ ದಿ.ಆರ್. ಚಕ್ರೇಶ್ವರ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ, ಎಸ್.ಎಸ್.ಎಲ್.ಸಿ, ಪ್ಲಸ್ ವನ್, ಪ್ಲಸ್ ಟು ಹಾಗೂ ಉನ್ನತ ಪ್ರತಿಭಾನ್ವಿತರಿಗೆ ಪುರಸ್ಕಾರ, ಬಹುಮಾನ ವಿತರಣೆ ನಡೆಯಲಿರುವುದು. ಕಡಬ ಮರಾಟಿಸಮಾಜ ಸೇವಾಸಂಘದ ಅಧ್ಯಕ್ಷ ಕುಶಾಲಪ್ಪ ನಾಯ್ಕ ಶುಭಾಶಂಸನೆಗೈಯಲಿರುವರು. ಕೃಷ್ಣ ಬದಿಯಡ್ಕ, ಗೋಪಿಕೃಷ್ಣ ಬದಿಯಡ್ಕ, ಐತ್ತಪ್ಪ ನಾಯ್ಕ ವಿದ್ಯಾಗಿರಿ ಬಹುಮಾನ ವಿತರಿಸುವರು. ಮಧ್ಯಾಹ್ನ 1ಕ್ಕೆ ಪ್ರಸಾದ ಭೋಜನ. ಅಪರಾಹ್ನ 2.30 ರಿಂದ ಶಾರದಾ ದೇವಿಯ ಶೋಭಾಯಾತ್ರೆಯೊಂದಿಗೆ ಸಮಾರಂಭ ಸಂಪನ್ನಗೊಳ್ಳಲಿದೆ.