ಪೆರ್ಲ: ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ(ಉಚಿತ ಶಿಕ್ಷಣ ಕೇಂದ್ರ) ಇದರ ಆಶ್ರಯದಲ್ಲಿ ಅ.7 ಮತ್ತು 8 ರಂದು 19 ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ ಪೆರ್ಲದ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಜರಗಲಿದೆ.
ಅ.7 ರಂದು ಅರ್ಚಕ ಗಣೇಶ್ ಭಟ್ ಪೆರ್ಲ ಅವರಿಂದ ಶಾರದಾ ಪ್ರತಿಷ್ಠೆ, ಬೆಳಿಗ್ಗೆ 9.15 ರಿಂದ ಭಜನಾ ಕಾರ್ಯಕ್ರಮ, 11 ಕ್ಕೆ ಪೂರ್ವರಂಗ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಮಂಗಳಾರತಿ, ಅಪರಾಹ್ನ 1.30 ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ `ನೂತನ ಪ್ರಸಂಗ' ಯಕ್ಷಗಾನ ಬಯಲಾಟ, ಸಂಜೆ 6.30 ರಿಂದ ಮಹಾಪೂಜೆ, ಮಂಗಳಾರಾತಿ ಜರಗಲಿದೆ.
ಅ.8 ರಂದು ಬೆಳಿಗ್ಗೆ 9 ಕ್ಕೆ ಮಹಾಪೂಜೆ, 9.30 ಕ್ಕೆ ಅಕ್ಷರಾಭ್ಯಾಸ, 10 ರಿಂದ ಗಾನವೈಭವ, ಮಧ್ಯಾಹ್ನ 1.30 ಕ್ಕೆ ಅತಿಥಿ ಕಲಾವಿದರು ಹಾಗು ಹಳೆ ವಿದ್ಯಾರ್ಥಿಗಳಿಂದ ಸುದರ್ಶನ ಭಾರ್ಗವ ಯಕ್ಷಗಾನ ಬಯಲಾಟ ಜರಗಲಿದೆ. ಸಂಜೆ 6.30 ಕ್ಕೆ ಮಹಾಪೂಜೆ, ಮಂಗಳಾರತಿ ನಡೆಯುವುದು.