ನವದೆಹಲಿ: ಎಲ್ಲಾ ರೀತಿಯ ಯುದ್ಧ ಸಾವು-ನೋವುಗಳಿಗಾಗಿ ಸಶಸ್ತ್ರ ಪಡೆಗಳಲ್ಲಿ ಕಾರ್ಯನಿರ್ವಹಿಸುವ ಕುಟುಂಬದ ಅಲಂಬಿತ ಸದಸ್ಯರಿಗೆ ಈಗಿರುವ ಪರಿಹಾರ ಮೊತ್ತವನ್ನು 2 ರಿಂದ 8 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿರ್ಧರಿಸಿದ್ದಾರೆ.
ಮಾಜಿ ಸೈನಿಕರ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಸ್ಥಾಪಿಸಲಾಗಿರುವ ಸೇನಾ ಸಂಘದ ಗಾಯಾಳುಗಳ ಕಲ್ಯಾಣ ನಿಧಿ ಅಡಿ ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ. ಸೇನಾ ಯುದ್ಧ ಗಾಯಾಳು ಅಭಿವೃದ್ಧಿ ನಿಧಿ(ಎಬಿಸಿಡಬ್ಲ್ಯುಎಫ್ )ನಡಿ ಹಣಕಾಸು ನೆರವನ್ನು ನೀಡಲಾಗುತ್ತಿದೆ. ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿದ್ದಾಗ ಭಾರತ್ ಕೆ ವೀರ್ ಫಂಡ್ ಯೋಜನೆಯನ್ನು ಆರಂಭಿಸಿ ಅದರಡಿಯಲ್ಲಿ ಯುದ್ಧದ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಅರೆಸೇನಾಪಡೆ ಯೋಧರ ಕುಟುಂಬದವರಿಗೆ ನೆರವು ನೀಡಲು ಆರಂಭಿಸಿದ್ದರು.